ADVERTISEMENT

ಒಮನ್ ಏರ್ ವೇಸ್ ಅಧಿಕಾರಿಗೆ ಕೊರೊನಾ ಸೋಂಕು: ಎಲ್ಲಾ ಸಿಬ್ಬಂದಿಗೆ ಚಿಕಿತ್ಸೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 11:01 IST
Last Updated 18 ಮಾರ್ಚ್ 2020, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಸ್ಕತ್: ಒಮನ್ ಅಂತರರಾಷ್ಟ್ರೀಯ ವಿಮಾನ ಸಂಸ್ಥೆ ಅಧಿಕಾರಿಗೆಕೊರೊನಾಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದಈ ವ್ಯಕ್ತಿಯೊಂದಿಗೆ ವ್ಯವಹರಿಸಿದ್ದ ತನ್ನ ಎಲ್ಲಾ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲು ಸಂಸ್ಥೆ ಆದೇಶಿಸಿದೆ.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಬ್ರೀನ್ ತೀವ್ರ ಶೀತದಿಂದ ಬಳಲುತ್ತಿದ್ದರು. ಕೂಡಲೆ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿಷಯ ತಿಳಿದ ಕೂಡಲೆ ಸಂಸ್ಥೆಯು ಅಧಿಕಾರಿ ಜೊತೆ ವ್ಯವಹರಿಸಿದ್ದ ಎಲ್ಲಾ ಸಿಬ್ಬಂದಿಗೆ 14 ದಿನಗಳವರೆಗೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ನೀಡಲು ಆದೇಶ ನೀಡಿದೆ.

ADVERTISEMENT

ಇದರಿಂದಾಗಿ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸುವ ಎಲ್ಲಾ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದೆ.ವಿಮಾನದಲ್ಲಿ ಸಂಚರಿಸುವ ಎಲ್ಲಾ ದೇಶಗಳ ಪ್ರಜೆಗಳಿಗೂ ಸುರಕ್ಷತೆಯ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದಿರುವುದಾಗಿ ಎಎನ್ ಐ ಸಂಸ್ಥೆ ತಿಳಿಸಿದೆ.

ಒಮನ್ ಏರ್ ಮಸ್ಕಟ್‌‌ನಲ್ಲಿ ಕಚೇರಿ ಹೊಂದಿದ್ದು,ಈ ಸಂಸ್ಥೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.