ADVERTISEMENT

ಕೋವಿಡ್‌: ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಬದ್ಧ- ಭಾರತ

ಪಿಟಿಐ
Published 13 ನವೆಂಬರ್ 2020, 10:03 IST
Last Updated 13 ನವೆಂಬರ್ 2020, 10:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ‘ಕೋವಿಡ್ 19‘ ವಿರುದ್ಧದ ಹೋರಾಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಜತೆಗೂಡಿ ಕೆಲಸ ಮಾಡುವ ತನ್ನ ಬದ್ಧತೆಯನ್ನು ಭಾರತ ಮತ್ತೊಮ್ಮೆ ಜಿ 77 ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಟ್ಟಿದೆ.

ಜಿ–77 ವಿದೇಶಾಂಗದ 44ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ‘ಯಾವುದೇ ಷರತ್ತುಗಳಿಲ್ಲದೇ ಅಭಿವೃದ್ಧಿಯ ವಿಚಾರದಲ್ಲಿ ನಮ್ಮ ಪಾಲುದಾರ ರಾಷ್ಟ್ರಗಳಿಗೆ ಸಹಕಾರ ನೀಡಲಾಗುತ್ತದೆ. ಯಾವುದೇ ದೇಶವನ್ನು ತನ್ನ ಹಿತಕ್ಕಾಗಿ ಭಾರತ ಸಾಲದ ಕೂಪಕ್ಕೆ ತಳ್ಳುವುದಿಲ್ಲ‘ ಎಂದು ಹೇಳಿದರು.

‘ಅಭಿವೃದ್ಧಿ ಹೊಂದುತ್ತಿರುವ ದೇಶಗಳ ದಶಕಗಳ ಪ್ರಗತಿಯನ್ನು ಈ ಸಾಂಕ್ರಾಮಿಕ ರೋಗ ಹಿಮ್ಮೆಟ್ಟಿಸಿದೆ. ಲಕ್ಷಾಂತರ ಜನರನ್ನು ಮತ್ತೆ ಬಡತನಕ್ಕೆ ತಳ್ಳಿದೆ‘ ಎಂದು ತಿರುಮೂರ್ತಿ ಕಳವಳ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.