ಇಸ್ಲಾಮಾಬಾದ್: ಪಾಕಿಸ್ತಾನದ 1.72 ಲಕ್ಷಕ್ಕೂ ಅಧಿಕ ಪ್ರಜೆಗಳು 2025ರ ಮೊದಲ ತ್ರೈಮಾಸಿಕದಲ್ಲಿ ಉದ್ಯೋಗವನ್ನರಸಿ ವಿದೇಶಗಳಿಗೆ ವಲಸೆ ಹೋಗಿದ್ದಾರೆ.
ಉದ್ಯೋಗಕ್ಕಾಗಿ ಜನವರಿಯಿಂದ ಮಾರ್ಚ್‌ವರೆಗೆ ಪಾಕಿಸ್ತಾನ ತೊರೆದಿರುವವರ ಬಗ್ಗೆ ವಲಸೆ ಮತ್ತು ಸಾಗರೋತ್ತರ ಉದ್ಯೋಗ ಘಟಕವು ವರದಿ ಬಿಡುಗಡೆಗೊಳಿಸಿದೆ.
ಸೌದಿ ಅರೇಬಿಯಾವೇ ಹೆಚ್ಚು ಜನರಿಗೆ ಉದ್ಯೋಗಗಳನ್ನು ನೀಡಿದ್ದು, 1 ಲಕ್ಷದ 21 ಸಾವಿರದ 190 ಮಂದಿ ಪಾಕಿಸ್ತಾನಿಯರು ಅಲ್ಲಿಗೆ ವಲಸೆ ಹೋಗಿದ್ದಾರೆ. ಒಮನ್‌ಗೆ 8,331 ಜನ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್‌ಗೆ 6,891 ಮಂದಿ ಉದ್ಯೋಗವನ್ನರಸಿ ಹೋಗಿದ್ದಾರೆ.
99 ಸಾವಿರದ 139 ಪಾಕಿಸ್ತಾನಿಯರು ವಿದೇಶಗಳಲ್ಲಿ ಸಾಮಾನ್ಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.