ADVERTISEMENT

ಕೋವಿಡ್‌ ವಿರುದ್ಧದ ಹೋರಾಟ: ವಿಶ್ವಬ್ಯಾಂಕ್‌ನಿಂದ 157 ಬಿಲಿಯನ್ ಡಾಲರ್ ಸಾಲ

ಪಿಟಿಐ
Published 20 ಜುಲೈ 2021, 6:49 IST
Last Updated 20 ಜುಲೈ 2021, 6:49 IST
ಡೇವಿಡ್‌ ಮಲ್ಪಾಸ್‌
ಡೇವಿಡ್‌ ಮಲ್ಪಾಸ್‌   

ವಾಷಿಂಗ್ಟನ್‌: ‘ಕೋವಿಡ್‌–19‘ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕಾಗಿ ವಿಶ್ವ ಬ್ಯಾಂಕ್‌ ಕಳೆದ 15 ತಿಂಗಳಲ್ಲಿ ವಿವಿಧ ದೇಶಗಳಿಗೆ 157 ಬಿಲಿಯನ್ ಡಾಲರ್‌ ಹಣದ ನೆರವು ನೀಡಿದೆ ಎಂದು ವಿಶ್ವ ಬ್ಯಾಂಕ್ ಸಮೂಹಗಳ ಅಧ್ಯಕ್ಷ ಡೇವಿಡ್‌ ಮಲ್ಪಾಸಸ್ ಹೇಳಿದ್ದಾರೆ.

ಈ ಸಾಂಕ್ರಾಮಿಕ ರೋಗ ಬರುವುದಕ್ಕೆ ಮುನ್ನ ವಿಶ್ವ ಬ್ಯಾಂಕ್ ನೀಡುತ್ತಿದ್ದ ಹಣಕ್ಕಿಂತ ಈ ಹದಿನೈದು ತಿಂಗಳಲ್ಲಿ ನೀಡಿರುವ ಹಣದ ಪ್ರಮಾಣ ಶೇ 60ರಷ್ಟು ಹೆಚ್ಚಿದೆ ಎಂದು ಡೇವಿಡ್‌ ತಿಳಿಸಿದ್ದಾರೆ.

‘ಕೋವಿಡ್‌ ಸಾಂಕ್ರಾಮಿಕ ಶುರುವಾದಾಗಿನಿಂದಲೂ, ಈ ಸಾಂಕ್ರಾಮಿಕದ ವಿರುದ್ಧ ಹೋರಾಡಲು ವಿಶ್ವ ಬ್ಯಾಂಕ್ ಸಮೂಹ 157 ಬಿಲಿಯನ್ ಡಾಲರ್ ಹಣವನ್ನು ಆರ್ಥಿಕ ನೆರವಾಗಿ ನೀಡಿದೆ. ಈ ಮೂಲಕ ಅನಿರೀಕ್ಷಿತ ಸಂಕಷ್ಟದ ವಿರುದ್ಧ ಹೋರಾಟಕ್ಕೆ ಪ್ರಬಲವಾದ ಬೆಂಬಲ ನೀಡಿದೆ‘ ಎಂದು ಅವರು ಹೇಳಿದ್ದಾರೆ.

ADVERTISEMENT

‘ಕೋವಿಡ್‌ ನಿಂದ ನಲುಗಿರುವ ಆರ್ಥಿಕ ಕ್ಷೇತ್ರದ ಚೇತರಿಕೆ ಕಾಣುವವರೆಗೂ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ನಾವು ತುರ್ತು ನೆರವು ನೀಡುವುದನ್ನು ಮುಂದುವರಿಸುತ್ತೇವೆ‘ ಎಂದು ಡೇವಿಡ್‌ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.