ADVERTISEMENT

J&Kನಲ್ಲಿ ಭಯೋತ್ಪಾದನೆಯಲ್ಲ, ಕಾನೂನುಬದ್ಧ ಹೋರಾಟ: ಪಾಕ್‌ ಸೇನಾ ಮುಖ್ಯಸ್ಥ ಮುನೀರ್‌

ಪಿಟಿಐ
Published 30 ಜೂನ್ 2025, 16:03 IST
Last Updated 30 ಜೂನ್ 2025, 16:03 IST
ಜನರಲ್‌ ಅಸೀಮ್‌ ಮುನೀರ್‌
ಜನರಲ್‌ ಅಸೀಮ್‌ ಮುನೀರ್‌   

ಇಸ್ಲಾಮಾಬಾದ್‌: ಜಮ್ಮು–ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ‘ಕಾನೂನುಬದ್ಧ ಹೋರಾಟ’ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌ ಬಣ್ಣಿಸಿದ್ದಾರೆ. ಅಲ್ಲದೇ, ಪಾಕಿಸ್ತಾನ ಎಂದಿಗೂ ಕಣಿವೆಯ ಜನರ ಪರವಾಗಿರಲಿದೆ ಎಂದೂ ಪ್ರತಿಪಾದಿಸಿದ್ದಾರೆ. 

ಕರಾಚಿಯಲ್ಲಿರುವ ಪಾಕಿಸ್ತಾನದ ನೌಕಾಪಡೆ ಅಕಾಡೆಮಿಯ ಕಾರ್ಯಕ್ರಮವೊಂದರಲ್ಲಿ ಮುನೀರ್‌ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿ, ‘ಭಾರತ ಯಾವುದನ್ನು ಭಯೋತ್ಪಾದನೆ ಎಂದು ಹೇಳುತ್ತಿದೆಯೋ ವಾಸ್ತವದಲ್ಲಿ ಅದು ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಕಾನೂನುಬದ್ಧ ಹೋರಾಟವಾಗಿದೆ. ಕಾಶ್ಮೀರದ ಜನರ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿರುವವರೇ ಈ ಹೋರಾಟ ಮತ್ತಷ್ಟು ಉಲ್ಬಣಗೊಳ್ಳಲು ಕಾರಣರಾಗಿದ್ದಾರೆ’ ಎಂದು ಹೇಳಿದ್ದಾರೆ. 

ಅಲ್ಲದೇ, ಕಾಶ್ಮೀರವನ್ನು ಪಾಕಿಸ್ತಾನದ ಜೀವನಾಡಿ ಎಂದು ಬಣ್ಣಿಸಿರುವ ಮುನೀರ್‌, ‘ಭಾರತ ಭವಿಷ್ಯದಲ್ಲಿ ಪಾಕಿಸ್ತಾನದ ವಿರುದ್ಧ ಯಾವುದೇ ದಾಳಿ ನಡೆಸಿದರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು’ ಎಂದೂ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.