ADVERTISEMENT

ಪಾಕಿಸ್ತಾನ: ಎರಡು ಪ್ರಕರಣಗಳಲ್ಲಿ ಇಮ್ರಾನ್‌ ಖಾನ್‌ ಖುಲಾಸೆ

ಪಿಟಿಐ
Published 19 ಮಾರ್ಚ್ 2024, 13:40 IST
Last Updated 19 ಮಾರ್ಚ್ 2024, 13:40 IST
<div class="paragraphs"><p>ಇಮ್ರಾನ್‌ ಖಾನ್‌ </p></div>

ಇಮ್ರಾನ್‌ ಖಾನ್‌

   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ 2022ರ ಮಾರ್ಚ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ನಡೆದಿದ್ದ ವಿಧ್ವಂಸಕ ಘಟನೆಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರನ್ನು ಇಲ್ಲಿನ ನ್ಯಾಯಾಲಯವೊಂದು ಮಂಗಳವಾರ ಖುಲಾಸೆಗೊಳಿಸಿದೆ. 

ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಶೈಯಿಷ್ಟಾ ಕುಂದಿ ಅವರು ಖಾನ್‌ ಅರ್ಜಿಯ ವಿಚಾರಣೆ ನಡೆಸಿ ಅವರನ್ನು ಖುಲಾಸೆಗೊಳಿಸಿದ್ದಾರೆ ಎಂದು ಜಿಯೊ ನ್ಯೂಸ್‌ ವರದಿ ಮಾಡಿದೆ.

ADVERTISEMENT

ಖಾನ್‌ ಪರವಾಗಿ ನಯೀಮ್‌ ಪಂಜೋತಾ ವಾದ ಮಂಡಿಸಿದರು.

2022ರಲ್ಲಿ ತಮ್ಮ ಪದಚ್ಯುತಿ ನಂತರ ತಕ್ಷಣ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಇಮ್ರಾನ್‌ ಖಾನ್‌ ಮೆರವಣಿಗೆ ನಡೆಸಿದ್ದರು. ಈ ವೇಳೆ ಅವರ ಹತ್ಯೆ ಯತ್ನ ಸಹ ನಡೆದಿತ್ತು.

ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್‌ (ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್‌ ಖಾನ್‌ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.