ADVERTISEMENT

ಪಿಟಿಐ ಪಕ್ಷ ನಿಷೇಧಕ್ಕೆ ಪಾಕ್‌ ಸರ್ಕಾರ ಚಿಂತನೆ

ಪಿಟಿಐ
Published 19 ಮಾರ್ಚ್ 2023, 11:17 IST
Last Updated 19 ಮಾರ್ಚ್ 2023, 11:17 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಾಕಿಸ್ತಾನ ತೆಹ್ರೀಕ್‌ ಇ–ಇನ್ಸಾಫ್ (ಪಿಟಿಐ) ಪಕ್ಷವನ್ನು ನಿಷೇಧಿಸುವ ಬಗ್ಗೆ ತಜ್ಞರ ಸಲಹೆ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ದೇಶದ ಒಳಾಡಳಿತ ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವುದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.

‘ಇಮ್ರಾನ್‌ ಖಾನ್‌ ಅವರ ‘ಜಮನ್ ಪಾರ್ಕ್‌’ ನಿವಾಸದಲ್ಲಿ ಭಯೋತ್ಪಾದಕರು ಅಡಗಿದ್ದರು. ನಿವಾಸದಿಂದ ಶಸ್ತ್ರಾಸ್ತ್ರ, ಪೆಟ್ರೋಲ್ ಬಾಂಬ್‌ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಟಿಐ ಒಂದು ಉಗ್ರ ಸಂಘಟನೆ ಎಂದು ಪ್ರಕರಣ ದಾಖಲಿಸಲು ಇಷ್ಟು ಸಾಕ್ಷ್ಯ ಸಾಕು’ ಎಂದು ಅವರು ಹೇಳಿದ್ದಾರೆ.

ADVERTISEMENT

ಶಸ್ತ್ರಸಜ್ಜಿತ 10,000 ಪೊಲೀಸ್‌ ಸಿಬ್ಬಂದಿ ಲಾಹೋರ್‌ನಲ್ಲಿರುವ ಇಮ್ರಾನ್‌ ಖಾನ್‌ ಅವರ ನಿವಾಸದಲ್ಲಿ ಶೋಧ ಕಾರ್ಯ ಕೈಗೊಂಡಿದ್ದರು. ನಿವಾಸದಲ್ಲಿ ಇದ್ದ ಶಸ್ತ್ರಾಸ್ತ್ರ ಮತ್ತು ಪೆಟ್ರೋಲ್‌ ಬಾಂಬ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.