ADVERTISEMENT

ಚೀನಾದ ಜಿನ್‌ಪಿಂಗ್‌ ಭೇಟಿ ಮಾಡಲಿರುವ ಪಾಕ್‌ ಪ್ರಧಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2022, 9:42 IST
Last Updated 26 ಅಕ್ಟೋಬರ್ 2022, 9:42 IST
ಚೀನಾ ಪ್ರಧಾನಿ ಜಿನ್‌ಪಿಂಗ್‌
ಚೀನಾ ಪ್ರಧಾನಿ ಜಿನ್‌ಪಿಂಗ್‌   

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿ ಶಬಾಜ್‌ ಶರೀಫ್‌ ಮುಂದಿನ ತಿಂಗಳು ಚೀನಾಗೆ ಭೇಟಿ ನೀಡಲಿದ್ದು, ಸಾಲ ಮನ್ನಾ ಮಾಡುವಂತೆ ಮನವಿ ಮಾಡಲಿದ್ದಾರೆ.

ಪ್ರಧಾನಿ ಜಿನ್‌ಪಿಂಗ್‌ ಅವರನ್ನು ಭೇಟಿ ಮಾಡುತ್ತಿದ್ದಾರೆ. ಉಭಯ ದೇಶಗಳ ನಡುವಿನ ಆರ್ಥಿಕ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ಈ ಭೇಟಿ ನಡೆಯಲಿದೆ ಎಂದು ಪಾಕಿಸ್ತಾನ ಹೇಳಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಕೋಟ್ಯಾಂತರ ಡಾಲರ್‌ ಸಾಲ ತೀರಿಸಲು ಪರದಾಡುತ್ತಿದೆ.

ಪಾಕಿಸ್ತಾನ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಸಾನ್‌ ಇಕ್ಬಾಲ್‌ ಈ ಭೇಟಿಯನ್ನು ಖಚಿತಪಡಿಸಿದ್ದಾರೆ. ಮುಂದಿನ ತಿಂಗಳ ಈ ಭೇಟಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆಗೆ ಹೊಸ ಆಯಾಮ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಭೇಟಿ ವೇಳೆ ಚೀನಾದಿಂದ ಮಾಡಿರುವ ಸಾಲ ಮನ್ನಾಕ್ಕೆ ಪಾಕಿಸ್ತಾನ ಕೋರಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಪ್ಯಾರಿಸ್‌ ಕ್ಲಬ್‌ ಒಂದರಲ್ಲಿಯೇ ಪಾಕಿಸ್ತಾನ 27 ಶತಕೋಟಿ ಡಾಲರ್‌ ಸಾಲ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.