ಕರಾಚಿ: ಇಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗಿದ್ದಾರೆ. ಅನಾಮಧೇಯ ಮೂಲಗಳಿಂದ ಅವರ ಖಾತೆಗೆ ಇದ್ದಕ್ಕಿದ್ದಂತೆ ₹10 ಕೋಟಿ ಜಮಾ ಆಗಿದೆ.
ಬಹದುರಬಾದ್ ಠಾಣೆಯ ತನಿಖಾಧಿಕಾರಿ ಆಮೀರ್ ಖಾತೆಗೆ ವೇತನದ ಜೊತೆಗೆ ₹10 ಕೋಟಿ ಜಮಾವಾಗಿದ್ದು ತಿಳಿದು ಅಚ್ಚರಿಯಾಗಿದೆ. ಬ್ಯಾಂಕ್ ಅಧಿಕಾರಿಗಳು ವಿಷಯ ತಿಳಿಸಿದ ನಂತರ ಇಷ್ಟೊಂದು ದೊಡ್ಡ ಮೊತ್ತದ ಹಣ ತನ್ನ ಖಾತೆಗೆ ಬಂದಿರುವುದು ಆಮೀರ್‌ಗೆ ತಿಳಿದಿದೆ.
ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಎಟಿಎಂ ಕಾರ್ಡ್ ಬ್ಲಾಕ್ ಮಾಡಲಾಗಿದೆ. ಹಣದ ಮೂಲದ ಕುರಿತು ತನಿಖೆ ಆರಂಭವಾಗಿದೆ. ಪಾಕಿಸ್ತಾನದ ಬೇರೆ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಇದೇ ರೀತಿ ಅನುಭವವಾಗಿದೆ. ಮೂವರು ಅಧಿಕಾರಿಗಳು ಕೂಡ ಹಣ ಜಮಾ ಆಗಿರುವ ಮಾಹಿತಿ ಇಲ್ಲವೆಂದು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.