ADVERTISEMENT

ಗುರುದ್ವಾರದಲ್ಲಿ ಫೋಟೊ ಶೂಟ್‌, ಸಹಜ ಪ್ರಕರಣ: ಪಾಕ್‌

ಗುರುದ್ವಾರದಲ್ಲಿ ರೂಪದರ್ಶಿಯ ಫೊಟೊಶೂಟ್‌ ವಿಚಾರ

ಪಿಟಿಐ
Published 2 ಡಿಸೆಂಬರ್ 2021, 14:59 IST
Last Updated 2 ಡಿಸೆಂಬರ್ 2021, 14:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್ (ಪಿಟಿಐ): ಕರ್ತಾರ್‌ಪುರದ ಧಾರ್ಮಿಕ ತಾಣ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ರೂಪದರ್ಶಿ ಒಬ್ಬರು ತಲೆಗೆ ರುಮಾಲು ಧರಿಸದೇ ಫೋಟೊಶೂಟ್‌ ನಡೆಸಿರುವುದು ಸಹಜ ಪ್ರಕರಣ ಎಂದು ಪಾಕಿಸ್ತಾನ ಹೇಳಿದೆ.

ಭಾರತದ ರಾಯಭಾರಿ ಕಚೇರಿಯ ಹಿರಿಯ ರಾಜತಾಂತ್ರಿಕರನ್ನು ಕರೆಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಕ್‌ನ ಪ್ರತಿಕ್ರಿಯೆಯನ್ನು ತಿಳಿಸಿದೆ.

ಮಂಗಳವಾರ ನವದೆಹಲಿಯಲ್ಲಿ ಪಾಕ್‌ನ ರಾಯಭಾರ ಕಚೇರಿಯ ಅಧಿಕಾರಿಯನ್ನು ಕರೆಯಿಸಿ ಭಾರತ ತನ್ನ ಆಕ್ಷೇಪವನ್ನು ದಾಖಲಿಸಿದ್ದು, ಧಾರ್ಮಿಕ ಸ್ಥಳವನ್ನು ಈ ಮೂಲಕ ಅಪವಿತ್ರಗೊಳಸಲಾಗಿದೆ ಎಂದು ಹೇಳಿತ್ತು.

ADVERTISEMENT

ಪಾಕ್‌ನ ರೂಪದರ್ಶಿ ಸೌಲೇಹಾ ಅವರು ಪಾಕಿಸ್ತಾನದ ಜವಳಿ ಉತ್ಪನ್ನಕ್ಕಾಗಿ ಗುರುದ್ವಾರದ ದರ್ಬಾರ್ ಸಾಹಿಬ್‌ ಬಳಿಕ ಫೋಟೊಶೂಟ್‌ ನಡೆಸಿದ್ದರು. ಆಗ ತಲೆಗೆ ರುಮಾಲು ಧರಿಸಿರಲಿಲ್ಲ. ಇದು, ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಮೂಲಕ ಸಿಖ್‌ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದೂ ಆರೋಪಿಸಲಾಗಿತ್ತು.

ವಿರೋಧ ವ್ಯಕ್ತವಾದ ಹಿಂದೆಯೇ ರೂದದರ್ಶಿ ಕ್ಷಮೆ ಕೋರಿದ್ದು, ಇನ್‌ಸ್ಟಾಗ್ರಾಂ ಖಾತೆಯಿಂದ ಸಂಬಂಧಿತ ಚಿತ್ರಗಳನ್ನು ತೆಗೆದುಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.