ADVERTISEMENT

ಇದೇ 30ರೊಳಗೆ ಅಫ್ಗಾನ್‌ನೊಂದಿಗಿನ ಗಡಿಯಲ್ಲಿ ಸಂಪೂರ್ಣ ಬೇಲಿ: ಪಾಕಿಸ್ತಾನ

ಪಿಟಿಐ
Published 20 ಜೂನ್ 2021, 7:54 IST
Last Updated 20 ಜೂನ್ 2021, 7:54 IST
‍ಪ್ರಾತಿನಿಧಿಕ ಚಿತ್ರ
‍ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್‌: ಅಫ್ಗಾನಿಸ್ತಾನದಿಂದ ಅಮೆರಿಕವು ತನ್ನ ಸೇನಾಪಡೆಯನ್ನು ಹಿಂದೆಗೆದುಕೊಳ್ಳಲು ಆರಂಭಿಸಿರುವಂತೆಯೇ ಅನಿಶ್ಚಿತತೆಯೂ ಮನೆಮಾಡಿದ್ದು, ಗಡಿಯಲ್ಲಿ ಬೇಲಿ ಹಾಕುವ ಪ್ರಕ್ರಿಯೆಯನ್ನು ಜೂನ್‌ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು ಎಂದು ಪಾಕಿಸ್ತಾನವು ಪ್ರಕಟಿಸಿದೆ.

ಈ ಬಗ್ಗೆ ಪಾಕಿಸ್ತಾನ ಸಂಸತ್ತಿಗೆ ಮಾಹಿತಿ ನೀಡಿರುವ ಒಳಾಡಳಿತ ಸಚಿವ ರಶೀದ್‌ ಅಹಮದ್‌,‘ ಅಫ್ಗಾನಿಸ್ತಾನದೊಂದಿಗಿನ ಗಡಿಯಲ್ಲಿ ಬೇಲಿ ಹಾಕುವ ಪ್ರಕ್ರಿಯೆ ಶೇಕಡ 88ರಷ್ಟು ಪೂರ್ಣಗೊಂಡಿದೆ. ಜೂನ್‌ 30ರೊಳಗೆ ಇನ್ನುಳಿದ ಕೆಲಸವೂ ಸಂಪೂರ್ಣಗೊಳ್ಳಲಿದೆ’ ಎಂದರು.

2017ರಲ್ಲಿ ಅಫ್ಗಾನಿಸ್ತಾನದೊಂದಿಗಿನ 2,600 ಕಿ.ಮೀ ಗಡಿಯಲ್ಲಿ ಬೇಲಿ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದು ಏಪ್ರಿಲ್‌ 2021ರಲ್ಲಿ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ.

ADVERTISEMENT

ಗಡಿಯಲ್ಲಿ ಎರಡು ಸೆಟ್‌ ಚೈನ್-ಲಿಂಕ್ ಬೇಲಿಗಳು ಮತ್ತು ಕನ್ಸರ್ಟಿನಾ ತಂತಿ ಬೇಲಿಗಳನ್ನು ಹಾಕಲಾಗುತ್ತಿದೆ. ಪಾಕಿಸ್ತಾನದ ಬದಿಯಲ್ಲಿ 3.6 ಮೀಟರ್ ಮತ್ತು ಅಫ್ಗಾನ್‌ ಬದಿಯಲ್ಲಿ 4 ಮೀಟರ್ ಎತ್ತರದ ಡಬಲ್‌ ಬೇಲಿಯನ್ನು ಹಾಕಲಾಗುತ್ತಿದೆ.

ಗಡಿಯುದ್ದಕ್ಕೂ ಕಣ್ಗಾವಲು ಕ್ಯಾಮೆರಾ ಮತ್ತು ಇನ್‌ಫ್ರಾರೆಡ್‌ ಡಿಟೆಕ್ಟರ್ಸ್‌ಗಳನ್ನು ಅಳವಡಿಸಲಾಗಿದೆ. ಭದ್ರತಾ ವ್ಯವಸ್ಥೆಯ ಭಾಗವಾಗಿ 1000 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.