ADVERTISEMENT

ನಮ್ಮಲ್ಲಿ ಉಗ್ರ, ಜಿಹಾದಿ ಚಟುವಟಿಕೆ ನಡೆಯುತ್ತಿದೆ: ಸತ್ಯ ಒಪ್ಪಿಕೊಂಡ ಪಾಕ್‌ ಸೇನೆ

ಏಜೆನ್ಸೀಸ್
Published 29 ಏಪ್ರಿಲ್ 2019, 14:32 IST
Last Updated 29 ಏಪ್ರಿಲ್ 2019, 14:32 IST
   

ಇಸ್ಲಾಮಾಬಾದ್ : ‘ಪಾಕಿಸ್ತಾನದಲ್ಲಿ ಉಗ್ರ ಹಾಗೂ ಜಿಹಾದಿ ಚಟುವಟಿಕೆಗಳು ನಡೆಯುತ್ತಿರುವುದು ಸತ್ಯ’ ಎಂದು ಪಾಕಿಸ್ತಾನ ಸೇನೆ ಸೋಮವಾರ ಒಪ್ಪಿಕೊಂಡಿದೆ.

‘ಭಯೋತ್ಪಾದಕ ಸಂಘಟನೆ ಮತ್ತು ಜಿಹಾದಿ ಗುಂಪುಗಳನ್ನು ನಾವು ನಿಷೇಧಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್‌ ಜನರಲ್ ಆಸಿಫ್‌ ಗಫೂರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇಸ್ಲಾಮಾಬಾದ್‌ನಲ್ಲಿ ಭಯೋತ್ಪಾದನೆಯಿಂದ ಸಾಕಷ್ಟು ನಷ್ಟಗಳಾಗಿವೆ. ಹಿಂದಿನ ಸರ್ಕಾರ ಭಯೋತ್ಪಾದನೆಯನ್ನು ನಿಗ್ರಹಿಸಲು ವಿಫಲವಾಗಿದೆ. ಅದರಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡಿದ್ದೇವೆ. ಉಗ್ರವಾದವನ್ನು ನಾಶಪಡಿಸಲು ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ’ ಎಂದು ಗಫೂರ್‌ ಹೇಳಿದರು.

ADVERTISEMENT

‘ಉಗ್ರರ ಅನಿರೀಕ್ಷಿತ ದಾಳಿಗಳನ್ನು ಮಾಡುವಲ್ಲಿಯಷ್ಟೇ ದೇಶ ನಿರತವಾಗಿದೆ. ಎಲ್ಲಾ ಕಾನೂನು ಜಾರಿ ಸಂಸ್ಥೆಗಳೂ ಅದಲ್ಲಿಯೇ ತೊಡಗಿಸಿಕೊಂಡಿವೆ. ಹೀಗಾಗಿ ಇಷ್ಟು ದಿನಗಳು ಭಯೋತ್ಪಾದನಾ ಸಂಘಟನೆಗಳ ವಿರುದ್ಧ ತಂತ್ರಗಾರಿಕೆ ರೂಪಿಸಲು ಸಾಧ್ಯವಾಗಿಲ್ಲ’ ಎಂದು ಒಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.