ADVERTISEMENT

ಹುರಿಯತ್‌ ನಾಯಕರ ಜತೆ ಮತ್ತೆ ಪಾಕ್‌ ಮಾತುಕತೆ

ಪಿಟಿಐ
Published 3 ಫೆಬ್ರುವರಿ 2019, 18:29 IST
Last Updated 3 ಫೆಬ್ರುವರಿ 2019, 18:29 IST

ಇಸ್ಲಾಮಾಬಾದ್: ಭಾರತ ಆಕ್ಷೇಪ ವ್ಯಕ್ತಪಡಿಸಿದ್ದರೂ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್‌ ಖುರೇಷಿ ಮತ್ತೊಮ್ಮೆ ಹುರಿಯತ್‌ ಕಾನ್ಫರೆನ್ಸ್ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ.

ಈ ಬಾರಿ ಹುರಿಯತ್‌ ಕಾನ್ಫರೆನ್ಸ್‌ ಅಧ್ಯಕ್ಷ ಸಯ್ಯದ್‌ ಅಲಿ ಷಾ ಗಿಲಾನಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಮಾತುಕತೆ ಸಂದರ್ಭದಲ್ಲಿ ಕಾಶ್ಮೀರ ವಿಷಯ ಮತ್ತು ‘ಕಾಶ್ಮೀರ ದಿನಕ್ಕೆ’ ಸಂಬಂಧಿಸಿದಂತೆ ಲಂಡನ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಮಾವೇಶದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ADVERTISEMENT

‘ಬ್ರಿಟನ್‌ ಸಂಸತ್‌ನಲ್ಲಿ ಸೋಮವಾರ ನಡೆಯಲಿರುವ ಅಂತರರಾಷ್ಟ್ರೀಯ ಕಾಶ್ಮೀರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಈ ಸಮಾವೇಶದ ಕುರಿತು ಗಿಲಾನಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ’ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ತಿಳಿಸಿದೆ.

ಕಳೆದ ಮಂಗಳವಾರ ಹುರಿಯತ್‌ ನಾಯಕ ಮಿರ್ವಾಜ್‌ ಉಮರ್‌ ಫಾರೂಖ್ ಹಾಗೂ ಖುರೇಷಿ ಕಾಶ್ಮೀರ ವಿಷಯದ ಕುರಿತು ಸಮಾಲೋಚನೆ ನಡೆಸಿದ್ದರು. ಈ ಮಾತುಕತೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.