ADVERTISEMENT

ಪಾಕಿಸ್ತಾನ ಸೇನೆ ಪರಿವರ್ತನೆಗೊಳ್ಳುತ್ತಿದೆ: ಆಸಿಮ್ ಮುನೀರ್

ಪಿಟಿಐ
Published 29 ಜನವರಿ 2026, 15:27 IST
Last Updated 29 ಜನವರಿ 2026, 15:27 IST
<div class="paragraphs"><p>ಆಶಿಮ್ ಮುನೀರ್ </p></div>

ಆಶಿಮ್ ಮುನೀರ್

   

(ಪಿಟಿಐ  ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನದ ಸೇನೆಯು ಹಲವು ಕ್ಷೇತ್ರಗಳಲ್ಲಿ ಗಣನೀಯ ಪರಿವರ್ತನೆಗೆ ಒಳಗಾಗುತ್ತಿದೆ ಎಂದು ಪಾಕ್ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಗುರುವಾರ ಹೇಳಿದ್ದಾರೆ. ಎಲ್ಲಾ ಬೆದರಿಕೆಗಳನ್ನು ಎದುರಿಸಿ, ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸೇನೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ADVERTISEMENT

‘ಭವಿಷ್ಯದಲ್ಲಿ ಸೇನಾ ಕಾರ್ಯಾಚರಣೆಗಳು ತಂತ್ರಜ್ಞಾನವನ್ನೇ ಹೆಚ್ಚಾಗಿ ಬಳಸಲಿವೆ. ಇದು ಆಕ್ರಮಣ ಮತ್ತು ರಕ್ಷಣಾ ಕಾರ್ಯಾಚರಣೆಗಳ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ. ಆದ್ದರಿಂದಲೇ ಪಾಕಿಸ್ತಾನ ಸೇನೆಯು ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿದೆ. ಈ ಪ್ರಕ್ರಿಯೆಯಲ್ಲಿ ನಾವೀನ್ಯ, ದೇಶೀಯವಾಗಿ ಪರಿಕರಗಳ ಉತ್ಪಾದನೆ ಮತ್ತು ರೂಪಾಂತರ ಮುಖ್ಯವಾಗಿ ಇರಲಿವೆ’ ಎಂದು ಅವರು ಹೇಳಿದ್ದಾರೆ.

ಬಹಾವಲ್‌ಪೂರ್ ರಕ್ಷಕಪಡೆಯನ್ನು ಭೇಟಿಯಾದ ಮುನೀರ್ ಅವರಿಗೆ ಪಡೆಯ ವಿವಿಧ ಕಾರ್ಯಾಚರಣೆ, ತರಬೇತಿ ಮತ್ತು ಆಡಳಿತಾತ್ಮಕ ಅಂಶಗಳ ಬಗ್ಗೆ ವಿವರಿಸಲಾಯಿತು.

ಈ ವೇಳೆ ಪಡೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸೈನಿಕರ ಉತ್ಸಾಹ, ವೃತ್ತಿಪರ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ಸನ್ನದ್ಧತೆಯನ್ನು ಶ್ಲಾಘಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.