ADVERTISEMENT

ಚೀನಾ ಅಧ್ಯಕ್ಷ ಷಿ ಭೇಟಿಯಾದ ಪಾಕ್ ಸೇನಾ ಮುಖ್ಯಸ್ಥ ಮುನೀರ್

ಪಿಟಿಐ
Published 2 ಸೆಪ್ಟೆಂಬರ್ 2025, 15:33 IST
Last Updated 2 ಸೆಪ್ಟೆಂಬರ್ 2025, 15:33 IST
<div class="paragraphs"><p>ಪಾಕಿಸ್ತಾನಿ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಶಲ್ ಆಶಿಮ್ ಮುನೀರ್</p></div>

ಪಾಕಿಸ್ತಾನಿ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಶಲ್ ಆಶಿಮ್ ಮುನೀರ್

   

ಬೀಜಿಂಗ್: ಪಾಕಿಸ್ತಾನಿ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಶಲ್ ಆಶಿಮ್ ಮುನೀರ್ ಅವರು ಚೀನಾದ ಅಧ್ಯಕ್ಷ ಷಿ ಜಿನ್ ಪಿಂಗ್ ಜೊತೆಗಿನ ಮೊದಲ ಸಭೆಯನ್ನು ದೇಶದ ಪ್ರಧಾನಿ ಶಹಬಾಝ್ ಷರೀಫ್ ಅವರೊಂದಿಗೆ ಮಂಗಳವಾರ ನಡೆಸಿದರು. ಸಭೆಯಲ್ಲಿ ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಮತ್ತು ಪ್ರಾ‌ದೇಶಿಕ ಸಹಕಾರದ ಕುರಿತು ವ್ಯಾಪಕ ಮಾತುಕತೆ ನಡೆಸಿದರು.

ಟಿಯಾನ್‌ಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಷರೀಫ್ ನಿಯೋಗದ ಭಾಗವಾಗಿ ಮುನೀರ್ ಇದ್ದಾರೆ. ಜಪಾನಿನ ಆಕ್ರಮಣದ ವಿರುದ್ಧದ ಚೀನಾದ ಜನರ ಪ್ರತಿರೋಧ ಯುದ್ಧದ 80ನೇ ವಾರ್ಷಿಕೋತ್ಸವದ ನೆನಪಿಗಾಗಿ ಬುಧವಾರ ಇಲ್ಲಿ ನಡೆಯಲಿರುವ ಚೀನೀ ಸೇನೆಯ ಭವ್ಯ ಮೆರವಣಿಗೆಯಲ್ಲಿ ಅವರು ಭಾಗವಹಿಸಲಿದ್ದಾರೆ.

ADVERTISEMENT

ದೇಶದ ಫೀಲ್ಡ್ ಮಾರ್ಷಲ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಜುಲೈನಲ್ಲಿ ಚೀನಾಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದ ಮುನೀರ್, ಉಪಾಧ್ಯಕ್ಷ ಹನ್ ಚುಂಗ್ ಅವರನ್ನು ಭೇಟಿಯಾಗಿದ್ದರು. ಆದರೆ ಈ ವೇಳೆ ಅವರು ಅಧ್ಯಕ್ಷ ಷಿ ಜಿನ್‌ ಪಿಂಗ್ ಅವರನ್ನು ಭೇಟಿಯಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.