ADVERTISEMENT

ಪಾಕ್‌: ಮತ್ತೆ 15 ಪೈಲಟ್‌ಗಳ ಅಮಾನತು

ನಕಲಿ ಲೈಸನ್ಸ್‌ ಹೊಂದಿದ ಆರೋಪ

ಪಿಟಿಐ
Published 18 ಜುಲೈ 2020, 11:31 IST
Last Updated 18 ಜುಲೈ 2020, 11:31 IST
ಪಾಕಿಸ್ತಾನ್ ಏರ್‌ಲೈನ್ಸ್‌ (ಸಂಗ್ರಹ ಚಿತ್ರ)
ಪಾಕಿಸ್ತಾನ್ ಏರ್‌ಲೈನ್ಸ್‌ (ಸಂಗ್ರಹ ಚಿತ್ರ)   

ಇಸ್ಲಾಮಾಬಾದ್: ನಕಲಿ ಲೈಸನ್ಸ್‌ ಹೊಂದಿದ್ದ ಆರೋಪಕ್ಕಾಗಿ ಮತ್ತೆ 15 ಪೈಲಟ್‌ಗಳನ್ನು ಪಾಕಿಸ್ತಾನ ವಿಮಾನಯಾನ ಪ್ರಾಧಿಕಾರ ಅಮಾನತುಗೊಳಿಸಿದೆ.

ಇದರಿಂದಾಗಿ ನಕಲಿ ದಾಖಲೆಗಳನ್ನು ಹೊಂದಿದ ಆರೋಪಕ್ಕಾಗಿ ಅಮಾನತುಗೊಂಡ ಪೈಲಟ್‌ಗಳ ಸಂಖ್ಯೆ 93ಕ್ಕೆ ಏರಿದೆ.

ವಿಮಾನಯಾನ ಸಚಿವಾಲಯ ಕಳೆದ ತಿಂಗಳು ತನಿಖೆ ನಡೆಸಿದ ಸಂದರ್ಭದಲ್ಲಿ 262 ಪೈಲಟ್‌ಗಳು ನಕಲಿ ಲೈಸನ್ಸ್‌ ಹೊಂದಿರುವುದನ್ನು ಪತ್ತೆ ಮಾಡಿತ್ತು. ಇವರ ವಿರುದ್ಧ ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುತ್ತಿದೆ.

ADVERTISEMENT

‘262 ಪೈಲಟ್‌ಗಳಲ್ಲಿ 28 ಪೈಲಟ್‌ಗಳ ಲೈಸನ್ಸ್‌ ರದ್ದುಪಡಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಈಗಾಗಲೇ 93 ಪೈಲಟ್‌ಗಳ ಲೈಸನ್ಸ್‌ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಉಳಿದ 141 ಪ್ರಕರಣಗಳ ತನಿಖೆಯನ್ನು ಶೀಘ್ರ ಮುಕ್ತಾಯಗೊಳಿಸಲಾಗುವುದು’ ಎಂದು ವಿಮಾನಯಾನ ವಿಭಾಗದ ವಕ್ತಾರ ಅಬ್ದುಲ್‌ ಸತ್ತಾರ್‌ ಖೋಖರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.