ADVERTISEMENT

ಪಾಕಿಸ್ತಾನ | ಕ್ರಿಕೆಟ್ ಪಂದ್ಯ ನಡೆಯುವಾಗಲೇ ಕ್ರೀಡಾಂಗಣದಲ್ಲಿ ಸ್ಫೋಟ: ಒಬ್ಬ ಸಾವು

ಪಿಟಿಐ
Published 7 ಸೆಪ್ಟೆಂಬರ್ 2025, 7:02 IST
Last Updated 7 ಸೆಪ್ಟೆಂಬರ್ 2025, 7:02 IST
<div class="paragraphs"><p>ಕ್ರಿಕೆಟ್ ಪಂದ್ಯ ನಡೆಯುವಾಗಲೇ ಕ್ರೀಡಾಂಗಣದಲ್ಲಿ ಸ್ಫೋಟ</p></div>

ಕ್ರಿಕೆಟ್ ಪಂದ್ಯ ನಡೆಯುವಾಗಲೇ ಕ್ರೀಡಾಂಗಣದಲ್ಲಿ ಸ್ಫೋಟ

   

ಪೆಶಾವರ: ಕ್ರಿಕೆಟ್‌ ಪಂದ್ಯ ನಡೆಯುವಾಗಲೇ ಕ್ರೀಡಾಂಗಣದಲ್ಲಿ ಸ್ಫೋಟ ಸಂಭವಿಸಿದ ಘಟನೆ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾದಲ್ಲಿ ನಡೆದಿದೆ. ಸ್ಫೋಟದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಜೌರ್ ಜಿಲ್ಲೆಯ ಖಾರ್ ತೆಹ್ಸಿಲ್‌ನಲ್ಲಿರುವ ಕೌಸರ್ ಕ್ರಿಕೆಟ್ ಮೈದಾನದಲ್ಲಿ ಈ ಸ್ಫೋಟ ಸಂಭವಿಸಿದೆ. ಯಾರನ್ನೋ ಗುರಿ ಮಾಡಿ ನಡೆಸಿದ ದಾಳಿಯಂತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ವಕಾಸ್ ರಫೀಕ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ADVERTISEMENT

ಇದು ಭಯೋತ್ಪಾದಕರ ಕೃತ್ಯ. ಆದರೆ ಈವರೆಗೆ ಯಾವ ಸಂಘಟನೆಯೂ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ಪೊಲೀಸರು ಆರೋಪಿಸಿದ್ದಾರೆ.

ಕಳೆದ ತಿಂಗಳು ಪಾಕಿಸ್ತಾನ ಭದ್ರತಾ ಪಡೆಗಳು ಆಪರೇಷನ್ ಸರ್ಬಕಫ್‌ ಕಾರ್ಯಾಚರಣೆ ಆರಂಭಿಸಿದ್ದರು. ಇದರಲ್ಲಿ ಕಳೆದ ಶನಿವಾರ ಮೂವರು ಭಯೋತ್ಪಾದಕರ ಹತ್ಯೆ ಮಾಡಲಾಗಿದ್ದು, ಒಬ್ಬರು ಪೊಲೀಸ್‌ ಸಿಬ್ಬಂದಿ ಮೃತಪಟ್ಟಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.