ADVERTISEMENT

ಕಾಶ್ಮೀರ: ಚರ್ಚಾ ವಸ್ತುವಾಗಿಸಲು ಕಷ್ಟದ ಸ್ಥಿತಿ– ಬಿಲಾವಲ್‌ ಭುಟ್ಟೊ

ಪಿಟಿಐ
Published 11 ಮಾರ್ಚ್ 2023, 13:53 IST
Last Updated 11 ಮಾರ್ಚ್ 2023, 13:53 IST
ಬಿಲಾವಲ್‌ ಬುಟ್ಟೊ ಜರ್ದಾರಿ
ಬಿಲಾವಲ್‌ ಬುಟ್ಟೊ ಜರ್ದಾರಿ   

ವಿಶ್ವಸಂಸ್ಥೆ: ‘ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಕಾರ್ಯಸೂಚಿಯ ಚರ್ಚೆಯ ಕೇಂದ್ರ ವಿಷಯವಾಗಿ ಮಾಡಲು ಪಾಕಿಸ್ತಾನ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಬುಟ್ಟೊ ಜರ್ದಾರಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ಯಾಲೆಸ್ತೀನ್‌ ಮತ್ತು ಕಾಶ್ಮೀರದ ಪರಿಸ್ಥಿತಿ ನಡುವೆ ಸಾಮ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಈ ಮಾತು ಹೇಳಿದರು.

ಕಾಶ್ಮೀಯ ವಿಷಯ ಉಲ್ಲೇಖಿಸಿದಾಗಲೆಲ್ಲ ನಮ್ಮ ಗೆಳೆಯ ರಾಷ್ಟ್ರ, ಅಂದರೆ ನಮ್ಮ ನೆರೆಯ ರಾಷ್ಟ್ರವು ತೀವ್ರ ಆಕ್ಷೇಪ ವ್ಯಕ್ತಪಡಿಸಲಿದೆ. ಇದು, ವಿಶ್ವಸಂಸ್ಥೆಯಲ್ಲಿ ಚರ್ಚೆಯಾಗಬೇಕಾದ ವಿವಾದವಲ್ಲ ಎಂದು ಪ್ರತಿಪಾದಿಸಲಿದೆ ಎಂದು ಬಿಲಾವಲ್‌ ಹೇಳಿದರು.

ADVERTISEMENT

ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪದೇ ಪದೇ ಕಾಶ್ಮೀಯ ವಿಷಯ ಉಲ್ಲೇಖಿಸುವ ಪಾಕಿಸ್ತಾನ ಈ ಬಗ್ಗೆ ಸದಸ್ಯ ರಾಷ್ಟ್ರಗಳ ಬೆಂಬಲ ಗಳಿಸಲು ವಿಫಲವಾಗುತ್ತದೆ. ಇದು, ಭಾರತ –ಪಾಕಿಸ್ತಾನಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ವಿಷಯ ಎಂದೇ ಹಲವು ರಾಷ್ಟ್ರಗಳು ಪರಿಗಣಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.