ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೂರು ದೋಣಿಗಳು ಮುಳುಗಿ ಮಕ್ಕಳು ಸೇರಿದಂತೆ 10 ಮಂದಿ ಪ್ರವಾಹ ಸಂತ್ರಸ್ತರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ದಕ್ಷಿಣ ಪಂಜಾಬ್‌ನಲ್ಲಿ ನೂರಾರು ಹಳ್ಳಿಗಳು ಪ್ರವಾಹದಲ್ಲಿ ಮುಳುಗಿವೆ. ಜನರ ರಕ್ಷಣೆ ಮಾಡುತ್ತಿದ್ದಾಗ ಮುಲ್ತಾನ್ ಮತ್ತು ಬಹಾವಲ್‌ನಗರ ಬಳಿ ದೋಣಿಗಳು ಮುಳುಗಿದವು, 10 ಮಂದಿ ಸಾವಿಗೀಡಾದರೆ ಇತರೆ 40 ಮಂದಿಯನ್ನು ರಕ್ಷಣೆ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 23ರ ನಂತರ ಪಂಜಾಬ್ ಪ್ರಾಂತ್ಯದಲ್ಲಿ ಕನಿಷ್ಠ 78 ಮಂದಿ ಪ್ರವಾಹ ಸಂಬಂಧಿ ದುರಂತಗಳಲ್ಲಿ ಸಾವಿಗೀಡಾಗಿದ್ದರು. ಈ ಸಂಖ್ಯೆ 88ಕ್ಕೆ ಏರಿದೆ. 42 ಲಕ್ಷ ಜನರು ತೊಂದರೆಗೆ ಸಿಲುಕಿದ್ದಾರೆ ಎಂದು ಸಚಿವ ಅಜಮ್ ಬೊಖಾರಿ ತಿಳಿಸಿದ್ದಾರೆ. ದಕ್ಷಿಣ ಪಂಜಾಬ್‌ನ ಪ್ರವಾಹ ಪೀಡಿತ ಸ್ಥಳಗಳಿಂದ 16 ಸಾವಿರ ಜನರನ್ನು ರಕ್ಷಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.