ಲಾಹೋರ್: ಪಾಕಿಸ್ತಾನ ಸರ್ಕಾರವು ಸೋಮವಾರ ನಿಷೇಧಿತ ತೆಹ್ರಿಕ್-ಇ-ಲಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಸಂಘಟನೆಯ 350 ಕಾರ್ಯಕರ್ತರನ್ನು ಬಿಡುಗಡೆ ಮಾಡಿದೆ ಎಂದು ಅಲ್ಲಿನ ಆತಂರಿಕ ಸಚಿವ ಶೇಖ್ ರಶೀದ್ ತಿಳಿಸಿದ್ದಾರೆ.
ಇದಕ್ಕೆ ಖಂಡನೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು ಈ ಕ್ರಮವನ್ನು ಟಿಎಲ್‌ಪಿಯ ಬೇಡಿಕೆಗಳಿಗೆ ಸಂಪೂರ್ಣ ಶರಣಾಗತಿ ಎಂದು ಬಣ್ಣಿಸಿವೆ.
ಸಂಘಟನೆಯ ಮುಖ್ಯಸ್ಥ ಸಾದ್ ರಿಜ್ವಿಯನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮುರಿಡ್ಕೆ ಮತ್ತು ಗುಜ್ರಾನ್ ವಾಲಾ ನಡುವಿನ ರಸ್ತೆಯಲ್ಲಿ 10,000 ಕ್ಕೂ ಹೆಚ್ಚು ಇಸ್ಲಾಮಿಕ್ ಕಾರ್ಯಕರ್ತರು ಮೊಕ್ಕಾಂ ಹೂಡಿದ್ದಾರೆ. ಈ ಗುಂಪು ಇಸ್ಲಾಮಾಬಾದ್‌ಗೆ ಆಗಮಿಸದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರವು ಸಂಘಟನೆಯ 350 ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದೆ.
ಒಂದು ವೇಳೆ ಎರಡು ದಿನಗಳೊಳಗೆ ಸಾದ್ ರಿಜ್ವಿಯ ಬಿಡುಗಡೆ ಮತ್ತು ಫ್ರಾನ್ಸ್ ರಾಯಭಾರಿಯನ್ನು ಅಮಾನತುಗೊಳಿಸಬೇಕೆಂಬ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಧರಣಿಯನ್ನು ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.
ಕಳೆದ ವಾರ ಲಾಹೋರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಟಿಎಲ್‌ಪಿಯ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.