
ಪಿಟಿಐ
ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ರೈತನೊಬ್ಬನನ್ನು ಜಮೀನ್ದಾರನ ಜಮೀನಿನಲ್ಲಿ ಮನೆ ನಿರ್ಮಿಸಿದ್ದಕ್ಕಾಗಿ ಗುಂಡಿಕ್ಕಿ ಕೊಲ್ಲಲಾಗಿದೆ. ಘಟನೆ ವಿರೋಧಿಸಿ ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆ ನಡೆದಿದೆ.
ಕಲೇಶ್ ಕೊಹ್ಲಿ (23) ಹತ್ಯೆಗೀಡಾದ ರೈತ.
ಆರೋಪಿಗಳಾದ ಜಮೀನ್ದಾರ ಸರ್ಫರಾಜ್ ನಿಜಾಮನಿ ಮತ್ತು ಆತನ ಸಹಾಯಕ ಜಫರುಲ್ಲಾ ಖಾನ್‌ನನ್ನು ಶನಿವಾರ ರಾತ್ರಿ ಪೊಲೀಸರ ವಿಶೇಷ ತಂಡ ಹೈದರಾಬಾದ್‌ನಲ್ಲಿ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 4ರಂದು ಘಟನೆ ನಡೆದಿದ್ದು, ನಿಜಾಮನಿ ಒಡೆತನದ ಭೂಮಿಯಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಕೊಹ್ಲಿಗೆ ಗುಂಡಿಕ್ಕಲಾಯಿತು. ಈ ವೇಳೆ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.