ADVERTISEMENT

ಪಾಕಿಸ್ತಾನ ಸುಳ್ಳು ಮಾಹಿತಿ ನೀಡುತ್ತಿರುವುದು ಇದು ಮೊದಲೇನಲ್ಲ: ಭಾರತದ ಪ್ರತಿನಿಧಿ

ಪಾಕ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟೀಕೆ

ಪಿಟಿಐ
Published 25 ನವೆಂಬರ್ 2020, 11:10 IST
Last Updated 25 ನವೆಂಬರ್ 2020, 11:10 IST
ಟಿ.ಎಸ್.ತಿರುಮೂರ್ತಿ, ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ.ಚಿತ್ರ: ತಿರುಮೂರ್ತಿಯವರ ಟ್ವಿಟ್ಟರ್ ಖಾತೆಯಿಂದ
ಟಿ.ಎಸ್.ತಿರುಮೂರ್ತಿ, ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ.ಚಿತ್ರ: ತಿರುಮೂರ್ತಿಯವರ ಟ್ವಿಟ್ಟರ್ ಖಾತೆಯಿಂದ   

ವಿಶ್ವಸಂಸ್ಥೆ: ‘ಭಯೋತ್ಪಾದನೆಗೆ ಉತ್ತೇಜಿಸುವುದು ಮತ್ತು ಸುಳ್ಳು ಮಾಹಿತಿ ಸೃಷ್ಟಿಸುವುದು ಪಾಕಿಸ್ತಾನಕ್ಕೆ ಹೊಸದೇನಲ್ಲ. ವಿಶ್ವಸಂಸ್ಥೆ ನಿಷೇಧಿಸಿರುವ ಹಲವು ಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ ನೀಡಿದೆ‘ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಪಾಕ್‌ ವಿರುದ್ಧ ಹರಿಹಾಯ್ದಿದ್ದಾರೆ.

‘ಭಾರತ ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ‘ ಎಂದು ವಿಶ್ವಂಸ್ಥೆಯಲ್ಲಿನ ಪಾಕಿಸ್ತಾನದ ಪ್ರತಿನಿಧಿ ಮುನೀರ್ ಅಕ್ರಮ್‌ ಅವರ ಆರೋಪ ಹಾಗೂ ಈ ಸಂಬಂಧ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯ ಗುಟೆರಸ್‌ ಅವರಿಗೆ ಕೆಲವು ದಾಖಲೆಗಳನ್ನು ನೀಡಿರುವ ವಿಚಾರಕ್ಕೆ ತಿರುಮೂರ್ತಿ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

ಪಾಕಿಸ್ತಾನ ಸುಳ್ಳು ಮಾಹಿತಿಗಳನ್ನು ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿರುವ ಅವರು, ದಶಕಗಳ ಕಾಲ ಉಗ್ರ ಒಸಾಮಾಬಿನ್ ಲಾಡನ್‌ಗೆ ಆಶ್ರಯ ನೀಡಿದ್ದು ಇದೇ ಪಾಕಿಸ್ತಾನ‘ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.