ADVERTISEMENT

ಭಾರತದ ಜೊತೆ ಮಾತುಕತೆ ನಡೆಸುವ ವಾತಾವರಣವಿಲ್ಲ: ಪಾಕ್‌

ಪಿಟಿಐ
Published 13 ಮೇ 2022, 15:29 IST
Last Updated 13 ಮೇ 2022, 15:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ‘ಭಾರತದ ಜೊತೆ ರಚನಾತ್ಮಕ ಮತ್ತು ಫಲಪ್ರದವಾದ ಮಾತುಕತೆ ನಡೆಸಲು ಸೂಕ್ತ ವಾತಾವರಣವಿಲ್ಲ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಆಸಿಂ ಇಫ್ತಿಕಾರ್‌ ಶುಕ್ರವಾರ ಹೇಳಿದ್ದಾರೆ.

ಭಾರತದ ಜೊತೆಗಿನ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವ ನೀತಿಯನ್ನು ಪಾಕಿಸ್ತಾನದ ಹೊಸ ಸರ್ಕಾರವೂ ಅನುಸರಿಸುತ್ತಿದೆ ಎಂದಿದ್ದಾರೆ.

ವಿವಾದಗಳನ್ನು ರಾಜತಾಂತ್ರಿಕವಾಗಿ ಇತ್ಯರ್ಥಪಡಿಸಲು ನಾವು ಬಯಸುತ್ತೇವೆ. ರಾಜತಾಂತ್ರಿಕತೆಯಲ್ಲಿ ನೀವು ಎಂದಿಗೂ ಬಾಗಿಲು ಮುಚ್ಚುವುದಿಲ್ಲ ಎಂದೂ ಆಸಿಂ ಅವರು ಹೇಳಿದ್ದಾರೆ.

ADVERTISEMENT

ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದ ಜೊತೆ ಸಾಮಾನ್ಯ ನೆರೆಯ ರಾಷ್ಟ್ರದ ಜೊತೆಗಿನ ಸಂಬಂಧವನ್ನು ಬಯಸುವುದಾಗಿ ಭಾರತವು ಪದೇ ಪದೇ ಹೇಳುತ್ತಿದೆ. ಇಂತಹ ವಾತಾವರಣ ನಿರ್ಮಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.