ADVERTISEMENT

ಭಾರತ ಸೇರಿ 11 ರಾಷ್ಟ್ರಗಳ ಮೇಲಿನ ವಿಮಾನ ಪ್ರಯಾಣ ನಿರ್ಬಂಧ ಸಡಿಲಿಸಿದ ಪಾಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2021, 8:38 IST
Last Updated 14 ಆಗಸ್ಟ್ 2021, 8:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್:‌ ಭಾರತ ಸೇರಿದಂತೆ ಹನ್ನೊಂದು ರಾಷ್ಟ್ರಗಳ ವಿಮಾನ ಪ್ರಯಾಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ಪಾಕಿಸ್ತಾನ ಸಡಿಲಗೊಳಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನಾಗರಿಕ ವಿಮಾನಯಾನಪ್ರಾಧಿಕಾರವು (ಸಿಎಎ)ಅಂತರರಾಷ್ಟ್ರೀಯ ಪ್ರಯಾಣ ಪಟ್ಟಿಯನ್ನು ಪರಿಶೀಲಿಸಿದ್ದು,ಭಾರತ, ಅರ್ಜೆಂಟೀನಾ, ಭೂತಾನ್‌, ಮಾಲ್ಡೀವ್ಸ್‌ ಮತ್ತು ಬ್ರೆಜಿಲ್‌ಸೇರಿ ಒಟ್ಟು ಹನ್ನೊಂದು ರಾಷ್ಟ್ರಗಳ ಪ್ರಯಾಣಿಕರಿಗೆ ನಿರ್ಬಂಧಸಡಿಲಿಸಿದೆ ಎಂದು ಎಆರ್‌ವೈ ನ್ಯೂಸ್‌ ಶುಕ್ರವಾರ ವರದಿ ಮಾಡಿದೆ.

ಈರಾಷ್ಟ್ರಗಳಲ್ಲಿರುವಪಾಕಿಸ್ತಾನಿ ನಾಗರಿಕರು ವಾಪಸ್‌ ಆಗಲು ಅನುಮತಿ ಇದೆಯಾದರೂ, ಕೋವಿಡ್‌ ಪರೀಕ್ಷೆಯ ನೆಗೆಟಿವ್‌ ವರದಿ ಕಡ್ಡಾಯವಾಗಿದೆ.

ADVERTISEMENT

ಕೋವಿಡ್‌ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ವಿಮಾನಯಾನ ಪ್ರಾಧಿಕಾರವು ಲಸಿಕೆ ಪಡೆಯದವರಿಗೆ ದೇಶೀಯ ವಿಮಾನ ಪ್ರಯಾಣವನ್ನೂ ನಿರ್ಬಂಧಿಸಿದೆ.

ಪಾಕಿಸ್ತಾನದ ನ್ಯಾಷನಲ್ ಕಮಾಂಡ್ ಮತ್ತು ಆಪರೇಷನ್ ಸೆಂಟರ್, ಭಾರತ ಸೇರಿದಂತೆ ಒಟ್ಟು26 ದೇಶಗಳಿಂದ ಬರುವ ಪ್ರಯಾಣಿಕರಿಗೆಜೂನ್‌ನಲ್ಲಿ ಪ್ರಯಾಣ ನಿರ್ಬಂಧಗಳನ್ನುವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.