ADVERTISEMENT

ಪಾಕ್‌ನಲ್ಲಿ ಗಣಿ ಕುಸಿತ: ಆರು ಸಾವು

ಪಿಟಿಐ
Published 13 ಅಕ್ಟೋಬರ್ 2025, 13:51 IST
Last Updated 13 ಅಕ್ಟೋಬರ್ 2025, 13:51 IST
.
.   

ಪೆಶಾವರ: ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಕುರ‍್ರಂ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಿಂದ ಗಣಿಯೊಂದು ಕುಸಿದು, ಆರು ಕಾರ್ಮಿಕರು ಮೃತಪಟ್ಟಿದ್ದಾರೆ.

ಮಧ್ಯ ಕುರ‍್ರಂ ಜಿಲ್ಲೆಯ ಟೋರಾ ವಾರೈನಲ್ಲಿ ಭಾನುವಾರ ಈ ದುರ್ಘಟನೆ ಸಂಭವಿಸಿದೆ.

ಸ್ಫೋಟದ ನಂತರ ಗಣಿಯ ಭಾಗವೊಂದು ಕುಸಿದಿದೆ. ನೀರಿನ ಮಟ್ಟ ಏಕಾಏಕಿ ಏರಿಕೆಯಾಯಿತು. ಕೆಲಸ ಮಾಡುತ್ತಿದ್ದ ಕಾರ್ಮಿಕರು ಗಣಿಯೊಳಗೆ ಸಿಲುಕಿದರು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.