ADVERTISEMENT

ಪಾಕ್‌ ನೌಕಾಪಡೆಯ ಕ್ಷಿಪಣಿ ಪರೀಕ್ಷೆ ಯಶಸ್ವಿ

ಪಿಟಿಐ
Published 10 ಜನವರಿ 2026, 16:17 IST
Last Updated 10 ಜನವರಿ 2026, 16:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನದ ನೌಕಾಪಡೆಯು, ಭೂಮೇಲ್ಮೈಯಿಂದ ಹಾರಿಸುವ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. 

ಉತ್ತರ ಅರಬ್ಬಿ ಸಮುದ್ರದಲ್ಲಿ ಕೈಗೊಂಡಿರುವ ಸಮರಾಭ್ಯಾಸದ ವೇಳೆ ‘ಎಲ್‌ವೈ–80 (ಎನ್‌)’ ಕ್ಷಿಪಣಿಯ ಪರೀಕ್ಷೆ ನಡೆಸಲಾಯಿತು. ಇದು ಕಾರ್ಯಾಚರಣೆ ಮತ್ತು ಯುದ್ಧ ಸನ್ನದ್ಧತೆಯನ್ನು ತೋರಿಸುತ್ತದೆ’ ಎಂದು ಪಾಕಿಸ್ತಾನ ಸೇನೆಯು ಅಧಿಕೃತ ಪ್ರಕಟಣೆ ತಿಳಿಸಿದೆ. 

‘ಕ್ಷಿಪಣಿಯು ವೈಮಾನಿಕ ಗುರಿಯನ್ನು ಯಶಸ್ವಿಯಾಗಿ ಹೊಡೆದುರುಳಿಸಿತು. ಇದು ಪಾಕಿಸ್ತಾನ ನೌಕಾಪಡೆಯ ಬಲಿಷ್ಠ ವಾಯುರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಇದು ಎದುರಾಳಿ ಗುರಿಯನ್ನು ಯಶಸ್ವಿಯಾಗಿ ಹೊಡೆದುರುಳಿಸುತ್ತದೆ’ ಎಂದಿದೆ. 

ADVERTISEMENT

ಇದೇ ವೇಳೆ ಮಾನವ ರಹಿತ ಯು‌ದ್ಧನೌಕೆಯ ಪರೀಕ್ಷೆಯನ್ನೂ ಯಶಸ್ವಿಯಾಗಿ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.