ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನಕ್ಕೆ ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಸಂತಾಪ ಸೂಚಿಸಿದ್ದಾರೆ.
ತಾಯಿಯ ವಿಯೋಗಕ್ಕಿಂದ ದೊಡ್ಡ ನಷ್ಟ ಬೇರೊಂದಿಲ್ಲ. ಭಾರತದ ಪ್ರಧಾನಿ ಮೋದಿ ಅವರ ತಾಯಿ ನಿಧನಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಹೀರಾಬೆನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಿಗಿನ ಜಾವ ನಿಧನರಾದರು.
ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಕರ್ತವ್ಯಕ್ಕೆ ಹಾಜರಾದರು.
ಇದನ್ನೂ ಓದಿ:
ತಾಯಿ ಹೀರಾಬೆನ್ ನಿಧನ: ಗುಜರಾತ್ನ ಗಾಂಧಿ ನಗರದ ನಿವಾಸಕ್ಕೆ ಆಗಮಿಸಿದ ಮೋದಿ
ಮೋದಿ ತಾಯಿ ನಿಧನ: ದ್ರೌಪದಿ ಮುರ್ಮು, ಅಮಿತ್ ಶಾ, ಸೋನಿಯಾ ಸೇರಿ ಗಣ್ಯರಿಂದ ಸಂತಾಪ
ಅಂತ್ಯ ಸಂಸ್ಕಾರ: ಅಮ್ಮನಲ್ಲಿ ತ್ರಿಮೂರ್ತಿಗಳನ್ನು ಕಂಡಿದ್ದೆ ಎಂದ ಪ್ರಧಾನಿ ಮೋದಿ
ತಾಯಿಯ ಅಂತ್ಯಕ್ರಿಯೆ ಬಳಿಕ ಕರ್ತವ್ಯಕ್ಕೆ ಮರಳಿದ ಮೋದಿ: ಹಲವು ಕಾಮಗಾರಿಗಳಿಗೆ ಚಾಲನೆ
ದಯಮಾಡಿ ವಿಶ್ರಾಂತಿ ಪಡೆಯಿರಿ: ಪ್ರಧಾನಿ ಮೋದಿಯನ್ನು ಸಂತೈಸಿದ ಮಮತಾ ಬ್ಯಾನರ್ಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.