
ಬಾಲ ಕಾರ್ಮಿಕ (ಪ್ರಾತಿನಿಧಿಕ ಚಿತ್ರ)
ಚಿತ್ರಕೃಪೆ: ಮೆಟಾ ಎಐ
ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಬಾಲ ಕಾರ್ಮಿಕರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನವರು 5 ರಿಂದ 17 ವರ್ಷದವರಾಗಿದ್ದಾರೆ ಎಂದು ಸಿಂಧ್‌ನ ಕಾರ್ಮಿಕ ಇಲಾಖೆಯ ಮಹಾನಿರ್ದೇಶಕ ಸೈಯದ್ ಮೊಹಮ್ಮದ್ ಮುರ್ತಾಜಾ ಅಲಿ ಶಾ ಹೇಳಿದ್ದಾರೆ.
ಜುಲೈನಿಂದ ಆಗಸ್ಟ್‌ವರೆಗೆ ಸಮೀಕ್ಷೆ ನಡೆಸಲಾಗಿದ್ದು, 10.6 ಲಕ್ಷ (5–17 ವರ್ಷದ ಶೇ 10:3) ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇತರ ಪ್ರಾಂತ್ಯಗಳಲ್ಲೂ ಬಾಲ ಕಾರ್ಮಿಕರಿದ್ದಾರೆ. ಆದರೆ ಸಿಂಧ್ ಪ್ರಾಂತ್ಯವೊಂದರಲ್ಲೇ 8 ಲಕ್ಷ ಮಕ್ಕಳು (10–17 ವರ್ಷದ ಶೇ 50.4ರಷ್ಟು ಮಕ್ಕಳು) ಅಪಾಯಕಾರಿ ಮತ್ತು ಶೋಷಣೆಯ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದರೆ ಹೆಚ್ಚಿನ ಅವಧಿಯ ಕೆಲಸ, ಪ್ರತಿಕೂಲ ಹವಾಮಾನ, ಕೃಷಿ ಮತ್ತು ಕೈಗಾರಿಕಾ ವಲಯದಲ್ಲಿ ಅಸುರಕ್ಷಿತ ಉಪಕರಣಗಳನ್ನು ಬಳಕೆ ಮಾಡಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೆಲಸ ಮಾಡುವ ಮಕ್ಕಳಲ್ಲಿ ಕೇವಲ ಶೇ 40.6ರಷ್ಟು ಮಾತ್ರ ಶಾಲೆಗೆ ಹೋಗುತ್ತಾರೆ. ಕೆಲಸ ಮಾಡದ ಮಕ್ಕಳಲ್ಲಿ ಶಾಲೆಗೆ ಹೋಗುವವರ ಪ್ರಮಾಣ ಶೇ 70.5ರಷ್ಟಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಬಾಲಕಾರ್ಮಿಕರನ್ನು ರಕ್ಷಿಸಲು ಸಿಂಧ್ ಪ್ರಾಂತ್ಯದ ಸರ್ಕಾರ ವಿಶೇಷ ಟಾಸ್ಕ್ ಫೋರ್ಸ್ ರಚಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.