ADVERTISEMENT

ಪಾಕ್‌: ಸೇನಾ ಮುಖ್ಯಸ್ಥರ ಅವಧಿ ವಿಸ್ತರಣೆಗೆ ‘ಸುಪ್ರೀಂ’ ತಡೆ

ಪಿಟಿಐ
Published 26 ನವೆಂಬರ್ 2019, 19:22 IST
Last Updated 26 ನವೆಂಬರ್ 2019, 19:22 IST
ಖಮರ್‌ ಜಾವೇದ್‌ ಬಾಜ್ವಾ
ಖಮರ್‌ ಜಾವೇದ್‌ ಬಾಜ್ವಾ   

ಇಸ್ಲಾಮಾಬಾದ್‌ : ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಾಜ್ವಾ (59) ಅವರ ಸೇವಾವಧಿ ವಿಸ್ತರಣೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆಹಿಡಿದಿದೆ.

ಬಾಜ್ವಾ ಅವರು ಇದೇ 29ರಂದು ನಿವೃತ್ತಿ ಹೊಂದಲಿದ್ದರು. ಪ್ರಾದೇಶಿಕ ಭದ್ರತೆಯಲ್ಲಿ ಬಾಜ್ವಾ ಅವರ ಅನುಭವ ಅಗತ್ಯ ಎಂದು ಪರಿಗಣಿಸಿದ್ದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಬಾಜ್ವಾ ಅವರ ಸೇವಾವಧಿಯನ್ನು ಮೂರು ವರ್ಷ ವಿಸ್ತರಿಸಿದ್ದರು. ಇದನ್ನು ಪ್ರಶ್ನಿಸಿ ರಾಯೀಜ್‌ ರಾಹೀ ಎಂಬುವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆಸೀಫ್‌ ಸಯೀದ್‌ ಖೋಸಾ ಅವರು ಬಾಜ್ವಾ ಅವರ ಸೇವಾವಧಿ ವಿಸ್ತರಣೆಯನ್ನು ಅಮಾನ್ಯ ಮಾಡಿದ್ದಾರೆ. ಅಲ್ಲದೆ, ಸೇನಾ ಮುಖ್ಯಸ್ಥರ ಸೇವಾವಧಿ ವಿಸ್ತರಣೆಯ ಪರಮಾಧಿಕಾರ ರಾಷ್ಟ್ರಾಧ್ಯಕ್ಷರಿಗೆ ಮಾತ್ರ ಇರುತ್ತದೆ ಎಂದೂ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.