ADVERTISEMENT

500 ಭಾರತೀಯ ಕೈದಿಗಳ ಬಿಡುಗಡೆಗೆ ಪಾಕಿಸ್ತಾನ ನಿರ್ಧಾರ

ಐಎಎನ್ಎಸ್
Published 11 ಮೇ 2023, 15:40 IST
Last Updated 11 ಮೇ 2023, 15:40 IST
   

ಕರಾಚಿ: 500 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನದ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕೈದಿಗಳಲ್ಲಿ 5 ವರ್ಷ ಜೈಲು ಶಿಕ್ಷೆ ಪೂರೈಸಿದ 499 ಮೀನುಗಾರರಿದ್ದು, ಹಂತ ಹಂತವಾಗಿ ಇವರನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಮಲಿರ್ ಜಿಲ್ಲಾ ಕಾರಾಗೃಹದಿಂದ 200 ಕೈದಿಗಳ ಮೊದಲ ತಂಡ ಬಿಡುಗಡೆಗೊಳಿಸಿ ಲಾಹೋರ್‌ಗೆ ಕಳುಹಿಸಲಾಗುತ್ತದೆ, ಈ ವೇಳೆ ಪ್ರಯಾಣಕ್ಕೆ ಈಧಿ ಪೌಂಡೇಶನ್ ರೈಲಿನ ವ್ಯವಸ್ಥೆ ಮಾಡಿಕೊಡಲಿದೆ. ಲಾಹೋರ್‌ನಿಂದ ವಾಘಾ ಗಡಿಯ ಮೂಲಕ ಭಾರತೀಯ ಅಧಿಕಾರಿಗಳಿಗೆ ಕೈದಿಗಳನ್ನು ಹಸ್ತಾಂತರಿಸಲಾಗುವುದು ಎಂದು ‘ಎಆರ್‌ವೈ’ ನ್ಯೂಸ್‌ ವರದಿ ಮಾಡಿದೆ.

ADVERTISEMENT

ಜೂನ್ 2ರಂದು 200 ಕೈದಿಗಳ ಮತ್ತೊಂದು ತಂಡ ಭಾರತಕ್ಕೆ ವಾಪಸಾದರೆ, ಜುಲೈ 3ರಂದು ಮೂರನೇ ತಂಡ ಹಸ್ತಾಂತರಗೊಳ್ಳಲಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಅರಬ್ಬಿ ಕಡಲ ಗಡಿ ರೇಖೆಯನ್ನು ಸರಿಯಾಗಿ ಗುರುತಿಸದ ಕಾರಣ ಪಾಕಿಸ್ತಾನ ಹಾಗೂ ಭಾರತದ ಮೀನುಗಾರರ ಬಂಧನವಾಗುತ್ತಿದೆ ಎಂದೂ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.