ಇಸ್ಲಾಮಾಬಾದ್: ನೋಂದಣಿ ಪುರಾವೆ ಕಾರ್ಡ್‌ಗಳನ್ನು ಹೊಂದಿರುವ 13 ಲಕ್ಷ ಅಫ್ಗಾನ್ ನಿರಾಶ್ರಿತರನ್ನು ಸೆಪ್ಟೆಂಬರ್ 1ರಿಂದ ವಾಪಸ್ ಕಳುಹಿಸಲು ಪಾಕಿಸ್ತಾನ ನಿರ್ಧರಿಸಿದೆ.
ದೇಶದಲ್ಲಿ ಅಕ್ರಮವಾಗಿ ನೆಲಸಿರುವ ವಿದೇಶಿ ಪ್ರಜೆಗಳನ್ನು ಹೊರಹಾಕುವ ಪ್ರಕ್ರಿಯೆಯನ್ನು ಪಾಕ್ ಸರ್ಕಾರವು 2023ರಲ್ಲಿ ಆರಂಭಿಸಿದಾಗಲೇ, ಅಫ್ಗಾನ್ ನಿರಾಶ್ರಿತರನ್ನು ಮರಳಿ ಅವರ ತಾಯ್ನಾಡಿಗೆ ಕಳುಹಿಸುವ ಪ್ರಯತ್ನಗಳು ಶುರುವಾಗಿದ್ದವು. ಇದೂವರೆಗೂ 8 ಲಕ್ಷ ಅಫ್ಗಾನ್ ಪ್ರಜೆಗಳನ್ನು ವಾಪಸ್ ಕಳಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸೆ. 1ರಿಂದ ಈ ಪ್ರಕ್ರಿಯೆಯು ಮತ್ತಷ್ಟು ವೇಗ ಪಡೆಯಲಿದೆ ಎಂದು ಫೆಡರಲ್ ಸರ್ಕಾರವು ಪ್ರಾಂತ್ಯ ಸರ್ಕಾರಗಳಿಗೆ ಮಾಹಿತಿ ನೀಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಅಫ್ಗಾನ್ ನಿರಾಶ್ರಿತರಿಗೆ ಒದಗಿಸಲಾಗಿರುವ ನೋಂದಣಿ ಪುರಾವೆ (ಪಿಒಆರ್) ಕಾರ್ಡ್‌ಗಳನ್ನು ನವೀಕರಿಸುವುದಿಲ್ಲ. ಅಕ್ರಮವಾಗಿ ನೆಲಸಿರುವ ಎಲ್ಲ ವಿದೇಶಿಗರನ್ನು ಗಡಿಪಾರು ಮಾಡಲಾಗುವುದು ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.