ADVERTISEMENT

ಪಾಕ್: ತ್ರಿವಳಿ ತಲಾಖ್‌ ನಿಷೇಧಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 17:20 IST
Last Updated 6 ಸೆಪ್ಟೆಂಬರ್ 2019, 17:20 IST

ಇಸ್ಲಾಮಾಬಾದ್‌(ಪಿಟಿಐ): ತ್ರಿವಳಿ ತಲಾಖ್‌ ಅನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿ ಸು ವಂತೆ ಕೌನ್ಸಿಲ್‌ ಆಫ್‌ ಇಸ್ಲಾಮಿಕ್‌ ಐಡಿಯಾಲಜಿ (ಸಿಐಐ) ಸಂಸ್ಥೆ ಪಾಕಿಸ್ತಾನ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯುನ್‌ ಪತ್ರಿಕೆ ವರದಿ ಮಾಡಿದೆ.

ಸಿಐಐ, ಪಾಕಿಸ್ತಾನ ಸರ್ಕಾ ರಕ್ಕೆ ಇಸ್ಲಾಂ ವಿಚಾರಗಳ ಕುರಿತು ಕಾನೂನು ಸಲಹೆ ನೀಡುವ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತ ಸರ್ಕಾರ ತ್ರಿವಳಿ ತಲಾಖ್‌ ನಿಷೇಧಿಸಿದ ಬೆನ್ನಲ್ಲೇ ಈ ಶಿಫಾರಸು ಮಾಡಿದೆ.

ತ್ರಿವಳಿ ತಲಾಖ್‌ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಕಾನೂನನ್ನುರಾಷ್ಟ್ರೀಯ ಅಸೆಂಬ್ಲಿ ರೂಪಿಸಲಿದೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.