ADVERTISEMENT

ಭಯೋತ್ಪಾದಕರ ನೆರವಿನಿಂದ ಕಾಶ್ಮೀರದ ಯಥಾಸ್ಥಿತಿ ಬದಲಿಗೆ ಪಾಕ್‌ ಪ್ರಯತ್ನ

ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಹಿರಿಯ ಸಹವರ್ತಿ ಅಲ್ಯಸ್ಸಾ ಆರ್ಯಸ್

ಪಿಟಿಐ
Published 22 ಸೆಪ್ಟೆಂಬರ್ 2020, 8:36 IST
Last Updated 22 ಸೆಪ್ಟೆಂಬರ್ 2020, 8:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳನ್ನು ಬಳಸಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಯಥಾಸ್ಥಿತಿ ಬದಲಿಸಲು ಮುಂದಾಗಿದೆ ಎಂದುಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲದ ರಾಜತಾಂತ್ರಿಕರೊಬ್ಬರು ಅಮೆರಿಕದ ಜನಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಅಲ್ಲಿ ಶಾಂತಿ ಕಾಪಾಡುವ ಪ್ರಯತ್ನಕ್ಕೆಪಾಕಿಸ್ತಾನದ ಈ ಪ್ರಯತ್ನ ಧಕ್ಕೆ ತರುತ್ತಿದೆ. ಅಲ್ಲದೆ,ಮಾನವ ಹಕ್ಕುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಹಿರಿಯ ಸಹವರ್ತಿ ಅಲಿಸಾ ಐರೆಸ್‌ ಅವರು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಮಿತಿ, ಏಷ್ಯಾದ ಉಪ ಸಮಿತಿ ಮತ್ತು ಪೆಸಿಫಿಕ್‌ ಮತ್ತು ನಾನ್‌ ಪ್ರೊಲಿಫಿರೇಷನ್‌ಗೆ ನೀಡಿರುವ ಹೇಳಿಕೆಯಲ್ಲಿ ಈ ಕುರಿತು ತಿಳಿಸಿದ್ದಾರೆ.

ADVERTISEMENT

‘ಪಾಕ್‌ನ ಇಂಥ ಕೃತ್ಯಗಳಿಂದಾಗಿ ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುತ್ತಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

‘ಪಾಕಿಸ್ತಾನ ಮೂಲದ ಭಯೋತ್ಪಾದಕರು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಕಾಶ್ಮೀರಿಗಳು ಮತ್ತು ಭಾರತ ಸರ್ಕಾರ ಗಡಿ ಭದ್ರತೆ ಮತ್ತು ಭಯೋತ್ಪಾದನೆ ಕುರಿತು ಕಠಿಣ ಸವಾಲನ್ನು ಎದುರಿಸುತ್ತಿದೆ ಎಂದು ಐರೆಸ್‌ ಹೇಳಿದ್ದಾರೆ. ‘ಎರಡು ದಶಕಗಳಿಂದ ಶಾಂತಿ ಕಾಪಾಡುವ ಎಲ್ಲ ಪ್ರಯತ್ನಗಳನ್ನು ಭಯೋತ್ಪಾದನೆ ಹಾಳು ಮಾಡುವ ಜತೆಗೆ ಜನರಲ್ಲಿ ಅಭದ್ರತೆಯನ್ನೂ ಸೃಷ್ಟಿಸಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.