ದಿ ಹೇಗ್ (ನೆದರ್ಲೆಂಡ್ಸ್): ಇಸ್ರೇಲ್ ಸೇನೆಯು ಗಾಜಾದಲ್ಲಿ ಜನರನ್ನು ಕೊಲ್ಲುತ್ತಿದೆ, ನಾಗರಿಕರ ಸ್ಥಳಾಂತರದಲ್ಲಿ ತೊಡಗಿದೆ ಮತ್ತು ನೆರವು ನೀಡುವ ಕೆಲಸಗಳಲ್ಲಿ ತೊಡಗಿರುವವರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪ್ಯಾಲೆಸ್ಟೀನ್ ರಾಯಭಾರಿ ಅಮ್ಮರ್ ಹಿಜಾಜಿ ಅವರು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇಸ್ರೇಲ್‌ನ ಕೃತ್ಯಗಳು ಹಿಂದೆಂದೂ ಕಾಣದಂತಹ ಪ್ರಮಾಣದಲ್ಲಿವೆ ಎಂದು ಹಿಜಾಜಿ ಹೇಳಿದ್ದಾರೆ. ತನ್ನ ವಶದಲ್ಲಿ ಇರುವ ಭೂಪ್ರದೇಶದಲ್ಲಿ ನೆರವು ಕಾರ್ಯಾಚರಣೆಗಳಿಗೆ ಅನುವು ಮಾಡಿಕೊಡುವ ಕಾನೂನು ಹೊಣೆಯು ಇಸ್ರೇಲ್ ಮೇಲೆ ಎಂಬ ವಿಚಾರವಾಗಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದಾರೆ.
ಆದರೆ, ನಾಗರಿಕರನ್ನು ಹಾಗೂ ನೆರವು ಸಿಬ್ಬಂದಿಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ ಎಂಬ ಆರೋಪವನ್ನು ಇಸ್ರೇಲ್ ನಿರಾಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.