ADVERTISEMENT

ಲ್ಯಾಂಡಿಂಗ್ ವೇಳೆ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ಭೂಪ! ಪ್ರಯಾಣಿಕರು ವಿಲವಿಲ..

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಆಘಾತಕಾರಿ ವಿಡಿಯೊ

ಎಎಫ್‌ಪಿ
Published 26 ಮೇ 2023, 14:44 IST
Last Updated 26 ಮೇ 2023, 14:44 IST
ಆಷಿಯಾನಾ ಏರ್‌ಲೈನ್ಸ್‌ ವಿಮಾನ
ಆಷಿಯಾನಾ ಏರ್‌ಲೈನ್ಸ್‌ ವಿಮಾನ   

ಸೋಲ್: ಲ್ಯಾಂಡಿಂಗ್ ವೇಳೆ ಪ್ರಯಾಣಿಕನೊಬ್ಬ ಆಷಿಯಾನಾ ಏರ್‌ಲೈನ್ಸ್‌ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದಿರುವ ವಿಲಕ್ಷಣ ಘಟನೆ ದಕ್ಷಿಣ ಕೊರಿಯಾದಲ್ಲಿ ಶುಕ್ರವಾರ ನಡೆದಿದೆ.

ಘಟನೆಯಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದು ಹಾಗೂ ಆಘಾತಗೊಂಡಿದ್ದು ಅವರನ್ನು ಸನಿಹದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಏರ್‌ಲೈನ್ಸ್‌ ವಕ್ತಾರರು ತಿಳಿಸಿದ್ದಾರೆ.

ಏಷಿಯನ್ ಏರ್‌ಲೈನ್ಸ್‌ನ ದೇಶಿಯ ವಿಮಾನವೊಂದು 200 ಪ್ರಯಾಣಿಕರನ್ನು ಹೊತ್ತು ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಿಂದ 244 ಕಿಮೀ ದೂರ ಇರುವ ಡಾಯಿಗು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಲ್ಯಾಂಡಿಂಗ್ ವೇಳೆ ವಿಮಾನ ಸುಮಾರು 650 ಅಡಿ ಎತ್ತರವಿದ್ದಾಗ ತುರ್ತು ನಿರ್ಗಮನ ದ್ವಾರದ ಬಳಿ ಕುಳಿತಿದ್ದ ಪ್ರಯಾಣಿಕ ಆ ಬಾಗಿಲನ್ನು ಎಳೆದು ತೆಗೆದಿದ್ದಾನೆ ಎಂದು ತಿಳಿದು ಬಂದಿದೆ.

ADVERTISEMENT

ಅದಾಗ್ಯೂ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಅನೇಕ ಪ್ರಯಾಣಿಕರಿಗೆ ಉಸಿರಾಟದ ತೊಂದರೆಯಾಗಿದ್ದು 12 ಜನಕ್ಕೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಬಾಗಿಲು ತೆಗೆದಿದ್ದ 44 ವರ್ಷದ ವ್ಯಕ್ತಿಯನ್ನು ಡಾಯಿಗು ವಿಮಾನ ನಿಲ್ದಾಣ ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನಿಸಿದವರಿಗೆ ದಕ್ಷಿಣ ಕೊರಿಯಾದಲ್ಲಿ ಕನಿಷ್ಠ 12 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.