ADVERTISEMENT

ಹವಾಯ್ ನೌಕಾ ನೆಲೆಯಲ್ಲಿ ಗುಂಡಿನ ದಾಳಿಗೆ ಮೂರು ಮಂದಿ ಬಲಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 4:05 IST
Last Updated 5 ಡಿಸೆಂಬರ್ 2019, 4:05 IST
ಪರ್ಲ್ ಹಾರ್ಬರ್ ನೌಕಾ ನೆಲೆ
ಪರ್ಲ್ ಹಾರ್ಬರ್ ನೌಕಾ ನೆಲೆ   

ಲಾಸ್ ಏಂಜಲೀಸ್: ಹವಾಯ್ ಪರ್ಲ್ ಹಾರ್ಬರ್ ನೌಕಾ ನೆಲೆಯಲ್ಲಿವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು ದಾಳಿ ನಡೆಸಿದ ವ್ಯಕ್ತಿಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ.

ಬುಧವಾರ ಮಧ್ಯಾಹ್ನ 2.30ಕ್ಕೆ (ಸ್ಥಳೀಯ ಕಾಲಮಾನ) ಗುಂಡಿನ ದಾಳಿ ನಡೆದಿದ್ದು, ಹಲವು ಗಂಟೆಗಳ ಕಾಲ ನೌಕಾನೆಲೆಯನ್ನು ಬಂದ್ ಮಾಡಲಾಗಿತ್ತು.

ಕಂಪ್ಯೂಟರ್ ಮುಂದೆ ಕೂತಿದ್ದಾಗ ಗುಂಡಿನ ಸದ್ದು ಕೇಳಿ ಕಿಟಕಿ ಬಳಿ ಬಂದು ನೋಡಿದಾಗ ಮೂವರು ಕೆಳಗೆ ಬಿದ್ದಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ADVERTISEMENT

ನೌಕಾದಳದ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬರು ಗುಂಡು ಹಾರಿಸಿದ ನಂತರ ತಲೆಗೆ ಗುಂಡಿಕ್ಕಿದ್ದನ್ನು ನೋಡಿದೆ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಗುಂಡಿನ ದಾಳಿ ನಡೆಸಿದ ವ್ಯಕ್ತಿ ಅಮೆರಿಕದ ನಾವಿಕ ಎಂದು ನ್ಯೂಸ್ 18 ಸುದ್ದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.