ADVERTISEMENT

ಅಫ್ಗಾನಿಸ್ತಾನ ಡ್ರೋನ್‌ ದಾಳಿಯಲ್ಲಿ ಇಬ್ಬರು ಐಸಿಸ್ ಉಗ್ರರ ಹತ್ಯೆ: ಅಮೆರಿಕ

ಏಜೆನ್ಸೀಸ್
Published 28 ಆಗಸ್ಟ್ 2021, 16:42 IST
Last Updated 28 ಆಗಸ್ಟ್ 2021, 16:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಅಫ್ಗಾನಿಸ್ತಾನದಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಐಸಿಸ್ ಖುರಾಸನ್ ಘಟಕದ ಇಬ್ಬರು ಉಗ್ರರು ಹತರಾಗಿದ್ದಾರೆ. ಮತ್ತೊಬ್ಬ ಉಗ್ರ ಗಾಯಗೊಂಡಿದ್ದಾನೆ ಎಂದು ಅಮೆರಿಕ ತಿಳಿಸಿದೆ.

ಶನಿವಾರ ಬೆಳಿಗ್ಗೆ ನಡೆದ ದಾಳಿಯಲ್ಲಿ ನಾಗರಿಕರಿಗೆ ಹಾನಿಯಾಗಿಲ್ಲ ಎಂದೂ ಅಮೆರಿಕ ಹೇಳಿದೆ.

ಕಾಬೂಲ್ ವಿಮಾನ ನಿಲ್ದಾಣದ ಬಳಿ ಆತ್ಮಹತ್ಯಾ ದಾಳಿಕೋರರು ಗುರುವಾರ ಬಾಂಬ್ ಸ್ಫೋಟಿಸಿದ್ದು, 13 ಮಂದಿ ಅಮೆರಿಕದ ಸೈನಿಕರು ಸೇರಿದಂತೆ 78 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಹೇಳಿತ್ತು. ಅದರಂತೆ ಶನಿವಾರ ಬೆಳಿಗ್ಗೆ ಅಫ್ಗಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಅಮೆರಿಕ ಸೇನೆಯು ಮಾನವರಹಿತ ವಾಯುದಾಳಿ ನಡೆಸಿತ್ತು.

ADVERTISEMENT

ಡ್ರೋನ್ ದಾಳಿಯಲ್ಲಿ ಹತರಾದ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ನೇರವಾಗಿ ಶಾಮೀಲಾಗಿದ್ದರೇ ಎಂಬುದನ್ನು ಅಮೆರಿಕ ಸ್ಪಷ್ಟಪಡಿಸಿಲ್ಲ.

‘ಅವರು ಐಸಿಸ್ ಖುರಾಸನ್ ಸಂಚುಕೋರರು ಮತ್ತು ಸಹಾಯಕರಾಗಿದ್ದರು’ ಎಂದು ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಕಾಬೂಲ್ ತೊರೆಯಲಾರಂಭಿಸಿದ ಅಮೆರಿಕ ಯೋಧರು: ಅಮೆರಿಕದ ಯೋಧರು ಕಾಬೂಲ್ ವಿಮಾನ ನಿಲ್ದಾಣ ತೊರೆಯುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಜಾನ್ ಕಿರ್ಬಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.