ADVERTISEMENT

ನೇಪಾಳದಲ್ಲಿ ಬಾಂಬ್ ಸ್ಫೋಟ: 8 ಮಂದಿಗೆ ಗಾಯ

ಪಿಟಿಐ
Published 14 ಮಾರ್ಚ್ 2021, 15:43 IST
Last Updated 14 ಮಾರ್ಚ್ 2021, 15:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಠ್ಮಂಡು: ನೇಪಾಳದ ಸಿಹಾರಾ ಜಿಲ್ಲೆಯ ಜನನಿಬಿಡ ಸರ್ಕಾರಿ ಕಚೇರಿಯೊಂದರಲ್ಲಿ ಭಾನುವಾರ ಪ್ರೆಷರ್‌ ಕುಕ್ಕರ್ ಬಾಂಬ್‌ ಸ್ಫೋಟಿಸಿದ್ದರಿಂದ ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ.

ಭೂ ಕಂದಾಯ ಕಚೇರಿಯ ಮೊದಲ ಮಹಡಿಯಲ್ಲಿ ಈ ಸ್ಫೋಟ ಸಂಭವಿಸಿತು. ಗಾಯಗೊಂಡವರೆಲ್ಲ ಕಂದಾಯ ಇಲಾಖೆಯ ಸಿಬ್ಬಂದಿ. ಇವರಲ್ಲಿ ಐವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಕೃಷ್ಣ ಕುಮಾರ್ ನಿರೌಲಾ ತಿಳಿಸಿದ್ದಾರೆ ಎಂಧು ‘ದಿ ಕಠ್ಮಂಡು ಪೋಸ್ಟ್‌’ ವರದಿ ಮಾಡಿದೆ.

ಘಟನಾ ಸ್ಥಳದಿಂದ ಜನತಾಂತ್ರಿಕ್‌ ತೆರೈ ಮುಕ್ತಿ ಮೋರ್ಚಾ (ಕ್ರಾಂತಿಕಾರಿ) ಸಂಘಟನೆಗೆ ಸೇರಿದ ಭಿತ್ತಿಪತ್ರಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.