ADVERTISEMENT

ಅನಾರೋಗ್ಯಪೀಡಿತ ಷರೀಫ್ ರೆಸ್ಟೊರೆಂಟ್‌ನಲ್ಲಿದ್ದ ಚಿತ್ರ ವೈರಲ್

ಪಿಟಿಐ
Published 14 ಜನವರಿ 2020, 20:01 IST
Last Updated 14 ಜನವರಿ 2020, 20:01 IST
ರೆಸ್ಟೊರೆಂಟ್‌ನಲ್ಲಿ ನವಾಜ್ ಷರೀಫ್ (ಬೆನ್ನು ಹಾಕಿ ಕುಳಿತಿರುವವರು)
ರೆಸ್ಟೊರೆಂಟ್‌ನಲ್ಲಿ ನವಾಜ್ ಷರೀಫ್ (ಬೆನ್ನು ಹಾಕಿ ಕುಳಿತಿರುವವರು)   

ಇಸ್ಲಾಮಾಬಾದ್ : ತೀವ್ರ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯಲು ಲಂಡನ್‌ಗೆ ತೆರಳಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (69) ಅವರು ಕುಟುಂಬ ಸದಸ್ಯರ ಜತೆಗೆ ರೆಸ್ಟೊರೆಂಟ್‌ನಲ್ಲಿರುವ ಚಿತ್ರ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಇದರಿಂದಾಗಿ ಷರೀಫ್‌ ಅವರ ‘ತೀವ್ರ ಅನಾರೋಗ್ಯ’ ಕುರಿತು ವಿರೋಧಪಕ್ಷಗಳು ಶಂಕೆ ವ್ಯಕ್ತಪಡಿಸಿವೆ.

ವೈರಲ್ ಆಗಿರುವ ಚಿತ್ರದಲ್ಲಿ, ಷರೀಫ್ ಆರೋಗ್ಯವಂತರಾಗಿಯೇ ಕಾಣಿಸುತ್ತಿದ್ದಾರೆ. ಷರೀಫ್ ತಮ್ಮ ಪುತ್ರ ಹಸನ್ ಹಾಗೂ ಇತರರ ಜತೆ ಇದ್ದಾರೆ.

ಈ ಚಿತ್ರವನ್ನು ಟ್ವೀಟ್ ಮಾಡಿರುವ ವಿಜ್ಞಾನ ಸಚಿವ ಫವದ್ ಚೌಧರಿ ಅವರು, ‘ಲಂಡನ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಎಲ್ಲಾ ರೋಗಿಗಳು (ಅಲ್ಲಿರುವವರು) ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

‘ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸಭೆಯಲ್ಲಿ ಸಹ ಈ ಚಿತ್ರದ ಕುರಿತು ಚರ್ಚೆಯಾಗಿದೆ’ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.