ADVERTISEMENT

ಎಚ್4 ವೀಸಾ ರದ್ದತಿ ನಿರ್ಣಯ ಅಂತಿಮ ಇಲ್ಲ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:09 IST
Last Updated 18 ಜೂನ್ 2019, 19:09 IST

ವಾಷಿಂಗ್ಟನ್: ‘ಎಚ್‌4 ವೀಸಾ ಹೊಂದಿರುವವರಿಗೆ ನೀಡಿರುವ ಉದ್ಯೋಗ ಅವಕಾಶಗಳನ್ನು ರದ್ದುಪಡಿಸುವ ಕುರಿತು ಟ್ರಂಪ್ ಆಡಳಿತ ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ. ಏಕೆಂದರೆ ಈ ನಿಟ್ಟಿನಲ್ಲಿ ನಿಯಮ ರೂಪಿಸುವ ಪ್ರಕ್ರಿಯೆ ಇನ್ನೂ ಬಾಕಿ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್‌ಸಿಐಎಸ್) ಉದ್ಯೋಗ ಆಧಾರಿತವಾದ ಎಲ್ಲಾ ವೀಸಾ ಯೋಜನೆಗಳನ್ನು ಪುನರ್‌ಪರಿಶೀಲಿಸುತ್ತಿದ್ದು, ಎಚ್4 ವೀಸಾ ಸಹ ಇದರಲ್ಲಿ ಸೇರಿದೆ ಎಂದು ಅವರು ತಿಳಿಸಿದ್ದಾರೆ.

ಎಚ್‌1–ಬಿ ವೀಸಾ ಹೊಂದಿರುವವರ ಪತಿ/ಪತ್ನಿಯರಿಗೆ ಎಚ್‌4 ವೀಸಾನೀಡಲಾಗುತ್ತದೆ. ಒಬಾಮ ಆಡಳಿತದ ಅವಧಿಯಲ್ಲಿ, ಕೌಶಲ ಹೊಂದಿರುವ ಎಚ್‌4 ವೀಸಾದಾರರಿಗೆ ಉದ್ಯೋಗ ಕಾರ್ಡ್ ನೀಡಲಾಗುತ್ತಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.