ADVERTISEMENT

ವಿದ್ಯುತ್ ತಂತಿಗೆ ಸಿಲುಕಿದ ವಿಮಾನ; ಪವಾಡಸದೃಶ ರೀತಿಯಲ್ಲಿ ಪಾರಾದ ಸಿಬ್ಬಂದಿ

ಏಜೆನ್ಸೀಸ್
Published 28 ನವೆಂಬರ್ 2022, 2:29 IST
Last Updated 28 ನವೆಂಬರ್ 2022, 2:29 IST
ಚಿತ್ರಕೃಪೆ: Twitter / @CockpitChatter
ಚಿತ್ರಕೃಪೆ: Twitter / @CockpitChatter   

ಗೈಥರ್ಸ್‌ಬರ್ಗ್:ಲಘು ವಿಮಾನವೊಂದು ವಿದ್ಯುತ್‌ ತಂತಿಗಳಿಗೆ ಸಿಲುಕಿಕೊಂಡಿರುವ ಪ್ರಕರಣ ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿ ಭಾನುವಾರ ಸಂಜೆ ವರದಿಯಾಗಿದೆ. ವಿಮಾನದಲ್ಲಿದ್ದ ಇಬ್ಬರುಅದೃಷ್ಠವಶಾತ್‌ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಮಾನವನ್ನು ಹೊರಗೆಳೆಯುವ ಪ್ರಯತ್ನ ಮುಂದುವರಿದಿದ್ದು, ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.

ನ್ಯೂಯಾರ್ಕ್‌ನ ವೈಟ್‌ಪ್ಲೇನ್ಸ್‌ನಿಂದ ಹೊರಟಿದ್ದ ಸಿಂಗಲ್‌ ಎಂಜಿನ್‌ ವಿಮಾನವುಸಂಜೆ 5.40ರ ಸುಮಾರಿಗೆಗೈಥರ್ಸ್‌ಬರ್ಗ್‌ನ ಮಾಂಟ್‌ಗೊಮೆರಿ ಕೌಂಟಿ ಏರ್‌ಪಾರ್ಕ್ ಬಳಿ ವಿದ್ಯುತ್ ತಂತಿಗಳಿಗೆ ಸಿಲುಕಿದೆ. ವಿಮಾನದಲ್ಲಿ ಇಬ್ಬರು ಇದ್ದರು ಎಂದು ಫೆಡರಲ್‌ ವಿಮಾನಯಾನ ಆಡಳಿತ ಹೇಳಿಕೆ ಬಿಡುಗಡೆ ಮಾಡಿದೆ.

ADVERTISEMENT

ಪತನಗೊಂಡ ವಿಮಾನವನ್ನು ಮೂನಿ ಎಂ20ಜೆ (Mooney M20J) ಎಂದು ಗುರುತಿಸಲಾಗಿದೆ.

ವಿಮಾನವು ನೆಲದಿಂದ ಸುಮಾರು 100 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದೆ. ವಿದ್ಯುತ್‌ ಪ್ರವಹಿಸುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.