ADVERTISEMENT

ಬಾಂಗ್ಲಾ: ಹಿಂದೂ ದೇವಾಲಯಗಳ ಮುಂದೆ ಗೋಮಾಂಸದ ಚೀಲ ನೇತು ಹಾಕಿದ ಕಿಡಿಗೇಡಿಗಳು

ಐಎಎನ್ಎಸ್
Published 2 ಜನವರಿ 2022, 9:05 IST
Last Updated 2 ಜನವರಿ 2022, 9:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಢಾಕಾ: ಬಾಂಗ್ಲಾದೇಶದ ಹಟಿಬಂಧ ಉಪಜಿಲಾ ಜಿಲ್ಲೆಯ ಗೆಂಡುಕುರಿ ಗ್ರಾಮದ ಮೂರು ಹಿಂದೂ ದೇವಾಲಯಗಳು ಮುಂದೆ ಹಸಿ ಗೋಮಾಂಸ ಇರಿಸಿರುವ ಪ್ಲಾಸ್ಟಿಕ್ ಚೀಲಗಳನ್ನು ನೇತು ಹಾಕಲಾಗಿದೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಶ್ರೀ ರಾಧಾ ಗೋವಿಂದ ಮಂದಿರ ಹಾಗೂ ಎರಡು ಕಾಳಿ ದೇಗುಲಗಳ ಮುಂಭಾಗದಲ್ಲಿ ಪ್ಲಾಸ್ಟಿಕ್‌ ಚೀಲಗಳು ಪತ್ತೆಯಾಗಿದ್ದು, ಅವುಗಳಲ್ಲಿ ಹಸಿ ಗೋಮಾಂಸ ಇರಿಸಲಾಗಿತ್ತು ಎಂದು ಉಪಜಿಲಾ ಪೂಜಾ ಪರಿಷತ್ತಿನ ಅಧ್ಯಕ್ಷ ದಿಲೀಪ್ ಕುಮಾರ್ ಸಿಂಗ್ ’ಐಎಎನ್‌ಎಸ್‌‘ಗೆ ತಿಳಿಸಿದರು.

ಪ್ರಕರಣ ಸಂಬಂಧ ಹಟಿಬಂಧ ಪೊಲೀಸ್ ಠಾಣೆಯಲ್ಲಿ ನಾಲ್ಕು ದೂರುಗಳು ದಾಖಲಾಗಿವೆ ಎಂದು ತಿಳಿಸಿದರು.

ADVERTISEMENT

ಘಟನೆ ಸಂಬಂಧ ಈಗಾಗಲೇ ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಇರ್ಷಾದುಲ್ ಆಲಂ ತಿಳಿಸಿದ್ದಾರೆ.

ಏತನ್ಮಧ್ಯೆ ಘಟನೆಯಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.