ADVERTISEMENT

ಎರಡು ದಿನಗಳ ಥಾಯ್ಲೆಂಡ್‌ ಪ್ರವಾಸ ಮಾಡಲಿರುವ ಪ್ರಧಾನಿ ಮೋದಿ

ಪಿಟಿಐ
Published 2 ಏಪ್ರಿಲ್ 2025, 16:02 IST
Last Updated 2 ಏಪ್ರಿಲ್ 2025, 16:02 IST
ಪ್ರಧಾನಿ ಮೋದಿ
ಪ್ರಧಾನಿ ಮೋದಿ   

ಬ್ಯಾಂಕಾಕ್‌: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ ಥಾಯ್ಲೆಂಡ್‌ಗೆ ಬಂದಿಳಿಯಲಿದ್ದಾರೆ. ‘ಬಂಗಾಳ ಕೊಲ್ಲಿ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಸಂಘಟನೆ’ (ಬಿಐಎಂಎಸ್‌ಟಿಇಸಿ) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದೇ ವೇಳೆ ಥಾಯ್ಲೆಂಡ್‌ನ ಪ್ರಧಾನಿ ಪೆಟೊಂತಾರ್ನ್‌ ಶಿನೊವಾರ್ಥ್‌ ಹಾಗೂ ರಾಜ ಮಹಾ ವಾಜಿರಲೊಂಗ್‌ಕೋರ್ನ್‌ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ. ಥಾಯ್ಲೆಂಡ್‌ನಲ್ಲಿರುವ ಭಾರತೀಯರು ಮೋದಿ ಅವರಿಗೆ ಸ್ವಾಗತ ಕೋರಲಿದ್ದಾರೆ. ಮೋದಿ ಅವರು ಶುಕ್ರವಾರ ಬೆಳಿಗ್ಗೆ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಥಾಯ್ಲೆಂಡ್‌ ಸೇರಿದಂತೆ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್‌ ಹಾಗೂ ಭೂತಾನ್‌ ದೇಶಗಳ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿವೆ. ಥಾಯ್ಲೆಂಡ್‌ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಸಭೆಯು ‘ಬ್ಯಾಂಕಾಕ್‌ ವಿಷನ್‌ 2030’ ಅನ್ನು ಅನುಮೋದಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ADVERTISEMENT

2018ರ ನಂತರ ಇದೇ ಮೊದಲ ಬಾರಿಗೆ ಬಿಐಎಂಎಸ್‌ಟಿಇಸಿ ಸದಸ್ಯ ರಾಷ್ಟ್ರಗಳು ಭೇಟಿಯಾಗುತ್ತಿವೆ. 2022ರಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶೃಂಗಸಭೆ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.