ADVERTISEMENT

ಸಿಒಪಿ26 ಶೃಂಗಸಭೆ: ಗ್ಲಾಸ್ಗೊದಲ್ಲಿ ಮೋದಿ, ಬ್ರಿಟನ್‌ ಪ್ರಧಾನಿ ಜತೆ ಮಾತುಕತೆ

ಪಿಟಿಐ
Published 31 ಅಕ್ಟೋಬರ್ 2021, 8:02 IST
Last Updated 31 ಅಕ್ಟೋಬರ್ 2021, 8:02 IST
ಪ್ರಧಾನಿ ನರೇಂದ್ರ ಮೋದಿ (ಪ್ರಾತಿನಿಧಿಕ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಪ್ರಾತಿನಿಧಿಕ ಚಿತ್ರ)   

ಲಂಡನ್‌/ಗ್ಲಾಸ್ಗೊ: ಸಿಒಪಿ26 ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗ್ಲಾಸ್ಗೊಗೆ ಆಗಮಿಸಲಿದ್ದಾರೆ.

ವಿಶ್ವಸಂಸ್ಥೆಯ ಸಮಾವೇಶದ ಸಂದರ್ಭದಲ್ಲಿ ಅವರು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಗ್ಲಾಸ್ಗೊದಲ್ಲಿ ಪ್ರಧಾನಿ ಮೋದಿ ಅವರು 120ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರು ನಡೆಸುವ ಚರ್ಚೆಯಲ್ಲಿ ಭಾಗಿಯಾಗುವರು.

ADVERTISEMENT

ಬ್ರಿಟನ್‌ನಲ್ಲಿ ಮೂರು ದಿನಗಳವರೆಗೆ ಅಂದರೆ ಮಂಗಳವಾರದವರೆಗೆ ಪ್ರವಾಸ ಕೈಗೊಳ್ಳುವ ಅವರು ಸಿಒಪಿ 26 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುವರು. ಸೋಮವಾರ ಮಧ್ಯಾಹ್ನ ಅವರು ಭಾರತದ ಹವಾಮಾನ ಕ್ರಿಯಾ ಯೋಜನೆ ಕುರಿತು ಹೇಳಿಕೆ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.