ADVERTISEMENT

ಮೋದಿ–ಕತಾರ್ PM ಮಾತುಕತೆ; ನೌಕಾದಳದ ನಿವೃತ್ತ ಅಧಿಕಾರಿಗಳ ಬಿಡುಗಡೆ ನಂತರ ಮೊದಲ ಸಭೆ

ಪಿಟಿಐ
Published 15 ಫೆಬ್ರುವರಿ 2024, 3:30 IST
Last Updated 15 ಫೆಬ್ರುವರಿ 2024, 3:30 IST
<div class="paragraphs"><p>ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕತಾರ್‌ ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ರಹಮಾನ್ ಅಲ್‌ ಥೇನಿ</p></div>

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕತಾರ್‌ ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ರಹಮಾನ್ ಅಲ್‌ ಥೇನಿ

   

ಚಿತ್ರಕೃಪೆ: X / @narendramodi

ದೋಹಾ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕತಾರ್‌ ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ರಹಮಾನ್ ಅಲ್‌ ಥಾನಿ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಮಾತುಕತೆ ನಡೆಸಿದ್ದಾರೆ.

ADVERTISEMENT

ಮೋದಿ ಅವರು ಕತಾರ್‌ ರಾಜಧಾನಿ ದೋಹಾಗೆ ಬುಧವಾರ ರಾತ್ರಿ ಬಂದರು. ಇದು ಕತಾರ್‌ಗೆ ಅವರ ಎರಡನೇ ಭೇಟಿಯಾಗಿದ್ದು, 2016ರ ಜೂನ್‌ನಲ್ಲಿ ಮೊದಲ ಸಲ ಬಂದಿದ್ದರು.

ಥಾನಿ ಭೇಟಿ ಕುರಿತು ತಮ್ಮ ಎಕ್ಸ್‌/ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಮೋದಿ, 'ಪ್ರಧಾನಿ ಮೊಹಮ್ಮದ್‌ ಬಿನ್‌ ಅಬ್ದುಲ್‌ರಹಮಾನ್ ಅಲ್‌ ಥಾನಿ ಅವರೊಂದಿಗೆ ಉತ್ತಮ ಸಭೆ ನಡೆಸಿದೆ. ಭಾರತ–ಕತಾರ್‌ ಸ್ನೇಹ ಸಂಬಂಧವನ್ನು ಉತ್ತೇಜಿಸುವುದರ ಸುತ್ತ ನಮ್ಮ ಮಾತುಕತೆ ನಡೆಯಿತು' ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ವಿದೇಶಾಂಗ ಸಚಿವಾಲಯವು, ಮೋದಿ ಹಾಗೂ ಕತಾರ್‌ ಪ್ರಧಾನಿ ನಡುವಣ ಮಾತುಕತೆ ಫಲಪ್ರದವಾಗಿತ್ತು ಎಂದು ತಿಳಿಸಿತ್ತು.

ಕತಾರ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ ಅವರನ್ನು ಅಲ್ಲಿನ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಸೊಲ್ತಾನ್ ಬಿನ್ ಸಾದ್ ಅಲ್–ಮುರೈಖಿ ಸ್ವಾಗತಿಸಿದರು.

ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಇಂದು (ಗುರುವಾರ) ಭೇಟಿ ಮಾಡಲಿರುವ ಮೋದಿ, ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿ, ಪ್ರಾದೇಶಿಕ ಅಭಿವೃದ್ಧಿ, ಜಾಗತಿಕ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ಆಪಾದಿತ ಬೇಹುಗಾರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಸಿಬ್ಬಂದಿಯನ್ನು ಕತಾರ್‌ ಬಿಡುಗಡೆ ಮಾಡಿದ ದಿನವೇ (ಫೆ.12), ಮೋದಿಯವರ ಕತಾರ್ ಭೇಟಿಯ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.