ADVERTISEMENT

ನಿಜ್ಜರ್ ಹತ್ಯೆ ಪ್ರಕರಣ:ಕೆನಡಾದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ– ಟ್ರುಡೊ

ಪಿಟಿಐ
Published 5 ಮೇ 2024, 12:31 IST
Last Updated 5 ಮೇ 2024, 12:31 IST
ಜಸ್ಟಿನ್‌ ಟ್ರುಡೊ
ಜಸ್ಟಿನ್‌ ಟ್ರುಡೊ   

ಟೊರಾಂಟೊ: ಕೆನಡಾದಲ್ಲಿ ಬಲಿಷ್ಠ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇದ್ದು, ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ. ಪ್ರಜೆಗಳ ರಕ್ಷಣೆಗೆ ರಾಷ್ಟ್ರವು ಬದ್ಧವಾಗಿದೆ ಎಂದು ಪ್ರಧಾನಿ ಜಸ್ಟಿನ್‌ ಟ್ರೂಡೊ ಹೇಳಿದರು.

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಭಾರತೀಯರನ್ನು ಬಂಧಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.

ನಿಜ್ಜರ್‌ ಅವರನ್ನು ಕೊಲಂಬಿಯಾದಲ್ಲಿ 2023ರ ಜೂನ್‌ 18ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 

ADVERTISEMENT

‘ಪ್ರಕರಣದ ತನಿಖೆಯು ಪ್ರಗತಿಯಲ್ಲಿದೆ. ತನಿಖೆಯು ಮೂವರ ಬಂಧನಕ್ಕೇ ಸೀಮಿತವಾಗಿಲ್ಲ’ ಎಂದು ಟ್ರೂಡೊ ಹೇಳಿದ್ದಾರೆ ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

‘ನಿಜ್ಜರ್‌ ಹತ್ಯೆ ನಂತರ ಕೆನಡಾದಲ್ಲಿರುವ ಸಿಖ್‌ ಸಮುದಾಯದ ಹಲವರು ಭೀತಿಯಲ್ಲಿದ್ದರು. ಕೆನಡಾದ ಪ್ರತಿಯೊಬ್ಬರಿಗೂ ಸುರಕ್ಷಿತ, ಬೆದರಿಕೆ ಮುಕ್ತ ಹಾಗೂ ತಾರತಮ್ಯ ರಹಿತವಾಗಿ ಬದುಕುವ ಹಕ್ಕಿದೆ’ ಎಂದು ಟ್ರೂಡೊ ಹೇಳಿದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.