ADVERTISEMENT

ಉಕ್ರೇನ್‌: ಆರು ಕಮಾಂಡ್‌ ಪೋಸ್ಟ್‌ಗಳು ಧ್ವಂಸ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 16:06 IST
Last Updated 27 ನವೆಂಬರ್ 2022, 16:06 IST

ಕೆರ್ಸಾನ್‌/ಮಾಸ್ಕೊ: ಉಕ್ರೇನ್‌ನ ಪ್ರಮುಖ ನಗರಗಳಲ್ಲಿನ ವಿದ್ಯುತ್‌ ಪೂರೈಕೆ, ಕುಡಿಯುವ ನೀರಿನ ಸರಬಾರಜು ವ್ಯವಸ್ಥೆ ಸೇರಿ ಪ್ರಮುಖ ಮೂಲಸೌಕರ್ಯಗಳನ್ನು ಕ್ಷಿಪಣಿಗಳ ದಾಳಿ ಮೂಲಕ ಹಾನಿಗೊಳಿಸಿರುವ ರಷ್ಯಾ ಪಡೆಗಳು, ಭಾನುವಾರ ದಕ್ಷಿಣ ಉಕ್ರೇನ್‌ನ ಹಲವು ಪ್ರದೇಶಗಳನ್ನು ಗುರಿಯಾಗಿಸಿ ಕ್ಷಿಪಣಿ ಮತ್ತು ಶೆಲ್‌ ದಾಳಿ ನಡೆಸಿದವು.

ರಷ್ಯಾ ತನ್ನ ಸೇನೆ ಹಿಂಪಡೆದ ಎರಡು ವಾರಗಳಲ್ಲಿ ಕೆರ್ಸಾನ್‌ ಮೇಲೆ ನಡೆಸಿರುವ ಶೆಲ್‌ ದಾಳಿಗೆ ಇದುವರೆಗೆ 32 ನಾಗರಿಕರು ಮೃತಪಟ್ಟಿರುವುದಾಗಿ ಉಕ್ರೇನ್‌ ಪೊಲೀಸರು ತಿಳಿಸಿದ್ದಾರೆ.

ಉಕ್ರೇನಿನ ನಾಲ್ಕು ಪ್ರದೇಶಗಳ ಮೇಲೆ ಶನಿವಾರ ರಷ್ಯಾ ನಡೆಸಿದ ದಾಳಿಯಲ್ಲಿ ಏಳು ನಾಗರಿಕರು ಮೃತಪಟ್ಟು, 19 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಕೆರ್ಸಾನ್‌ ಪ್ರಾಂತ್ಯವೊಂದರ ಮೇಲೆಯೇ 54 ಬಾರಿ ದಾಳಿಗಳು ನಡೆದಿವೆ ಎಂದು ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕಿರಿಲೊಟಿಮೊಶೆಂಕೊ ಹೇಳಿದರು.

ADVERTISEMENT

ಆರು ಸೇನಾ ಕಮಾಂಡ್‌ ಧ್ವಂಸ: ಕೆರ್ಸಾನ್‌ ಮತ್ತು ಹಾರ್ಕಿವ್‌ ಪ್ರದೇಶಗಳಲ್ಲಿ ಉಕ್ರೇನ್‌ನ ಆರು ಸೇನಾ ಕಮಾಂಡ್ ಕೇಂದ್ರಗಳನ್ನು ನಾಶಪಡಿಸಲಾಗಿದೆ. ಉಕ್ರೇನಿನ 50 ಸೇನಾ ತುಕಡಿಗಳು ಈ ದಾಳಿಯಲ್ಲಿ ಮೃತಪಟ್ಟ ಅಥವಾ ಗಾಯಗೊಂಡ ಸಾಧ್ಯತೆ ಇದೆ. ಡೊನೆಟ್‌ಸ್ಕ್‌ನಲ್ಲಿ ಉಕ್ರೇನ್‌ನ70 ಸೈನಿಕರನ್ನು ಕೊಲ್ಲಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಐಗೊರ್ ಕೊನಶೆಂಕೊವ್‌ ಭಾನುವಾರ ತಿಳಿಸಿರುವುದಾಗಿ ‘ಟಾಸ್‌’ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.