ADVERTISEMENT

ವಾಷಿಂಗ್ಟನ್‌ ಗುಂಡಿನ ದಾಳಿ: ನಾಲ್ವರ ಸಾವು

ಏಜೆನ್ಸೀಸ್
Published 26 ಆಗಸ್ಟ್ 2021, 7:31 IST
Last Updated 26 ಆಗಸ್ಟ್ 2021, 7:31 IST
ಗುಂಡಿನ ದಾಳಿ– ಪ್ರಾತಿನಿಧಿಕ ಚಿತ್ರ
ಗುಂಡಿನ ದಾಳಿ– ಪ್ರಾತಿನಿಧಿಕ ಚಿತ್ರ   

ಕೆನ್ನೆವಿಕ್‌(ಅಮೆರಿಕ): ಪಶ್ಚಿಮ ವಾಷಿಂಗ್ಟನ್‌ನಲ್ಲಿ ಬುಧವಾರ ಬಂದೂಕುಧಾರಿ ವ್ಯಕ್ತಿಯೊಬ್ಬ ಮನೆಗಳಿಗೆ ಬೆಂಕಿ ಹಚ್ಚಿ, ಮನಸೋ ಇಚ್ಛೆ ಗುಂಡು ಹಾರಿಸಿದ್ದರಿಂದ ಮೂರು ಜನರು ಸತ್ತು, ಒಬ್ಬ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಬೆಂಕಿ ಹೊತ್ತಿಕೊಂಡಿದ್ದ ದಿಕ್ಕಿನತ್ತ ಗುಂಡು ಹಾರಿಸಿದ್ದಾರೆ. ನಂತರ, ಆ ಜಾಗದಲ್ಲಿ ಶಂಕಿತ ವ್ಯಕ್ತಿಯೊಬ್ಬನ ಶವವಾಗಿ ಪತ್ತೆಯಾಗಿದೆ.

ವಾಷಿಂಗ್ಟನ್‌ ಫಿನ್ಲೆಯಲ್ಲಿ ವ್ಯಕ್ತಿಯೊಬ್ಬ ಬೆಳಗಿನ ಜಾವ 4 ಗಂಟೆ ವೇಳೆಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ, ಗುಂಡಿನ ದಾಳಿಯನ್ನೂ ನಡೆಸಿದ್ದಾನೆ ಎಂದು ಕೆಪಿಆರ್‌ ವರದಿ ಮಾಡಿದೆ.

ADVERTISEMENT

ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಗುಂಡೇಟಿನಿಂದ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಅದೇ ಪ್ರದೇಶದಲ್ಲಿರುವ ಎರಡು ಮನೆಗಳಿಗೆ ಬೆಂಕಿಬಿದ್ದಿರುವುದನ್ನು ಗುರುತಿಸಿದ್ದಾರೆ.

‘ಶಂಕಿತ ವ್ಯಕ್ತಿಯೇ ಫಿನ್ಲೆಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ, ನಂತರ ಬೆಂಟನ್ ಕೌಂಟಿಯಲ್ಲೂ ಸರಣಿ ಅಗ್ನಿ ಅನಾಹುತ ಸಂಭವಿಸಲು ಕಾರಣನಾಗಿದ್ದಾನೆ‘ ಎಂದು ಪೊಲೀಸರು ಹೇಳಿದ್ದಾರೆ. ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.