ADVERTISEMENT

ಅಮೆರಿಕ ಸ್ವಾತಂತ್ರ್ಯೋತ್ಸವ ದಿನದ ಪಥಸಂಚಲನದ ಮೇಲೆ ಗುಂಡಿನ ದಾಳಿ; ಶಂಕಿತನ ಬಂಧನ

ಏಜೆನ್ಸೀಸ್
Published 5 ಜುಲೈ 2022, 1:18 IST
Last Updated 5 ಜುಲೈ 2022, 1:18 IST
   

ವಾಷಿಂಗ್ಟನ್‌: ಷಿಕಾಗೊದ ಹೈಲ್ಯಾಂಡ್‌ ಪಾರ್ಕ್‌ನಲ್ಲಿ ಸೋಮವಾರ ನಡೆದ ಅಮೆರಿಕ ಸ್ವಾತಂತ್ರ್ಯೋತ್ಸವ ದಿನದ ಪಥಸಂಚಲನದ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಾಬರ್ಟ್‌ ಕ್ರಿಮೊ (22) ಎಂದು ಗುರುತಿಸಲಾಗಿದೆಎಂದು ಲೇಕ್‌ ಕೌಂಟಿಯ ಪೊಲೀಸರು ಮಾಹಿತಿ ನೀಡಿದ್ದಾರೆ.

ದುಷ್ಕರ್ಮಿಯು, ಪಥಸಂಚಲನ ವೀಕ್ಷಿಸಲು ಬಂದಿದ್ದ ಜನರ ಗುಂಪಿನ ಮೇಲೆಕಟ್ಟಡವೊಂದರ ಮೇಲ್ಛಾವಣಿಯಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಆತಂಕಗೊಂಡ ಜನರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.ದಾಳಿ ವೇಳೆಆರು ಮಂದಿ ಮೃತಪಟ್ಟು, ಕನಿಷ್ಠ 48 ಮಂದಿ ಗಾಯಗೊಂಡಿದ್ದಾರೆ.ಮಕ್ಕಳೂ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿಚಿಂತಾಜನಕವಾಗಿದೆ ಎಂದುತುರ್ತು ಸೇವೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

'ಪಥಸಂಚಲನಕ್ಕೆ ಸಿದ್ಧತೆ ನಡೆಸುತ್ತಿದ್ದೆವು. ಜನರು ಇದ್ದಕ್ಕಿದ್ದಂತೆ ಓಡಲಾರಂಭಿಸಿದರು. ಅದಕ್ಕೂ ಮುನ್ನ ನಮಗೆ ಗುಂಡಿನ ಶಬ್ದ ಕೇಳಿಸಿತು. ಆದರೆ, ಅದು ಪಟಾಕಿಯದ್ದಿರಬೇಕು ಎಂದು ನಾವು ಭಾವಿಸಿದ್ದೆವು' ಎಂದು ಮೆರವಣಿಗೆಯಲ್ಲಿ ಭಾಗವಹಿದ್ದಎಮಿಲಿ ಪ್ರಝಾಕ್‌ ತಿಳಿಸಿದ್ದಾರೆ.

ಈ ವರ್ಷ ಅಮೆರಿಕದಲ್ಲಿ ಅಂದಾಜು 40 ಸಾವಿರ ಮಂದಿ ಶೂಟೌಟ್ ನಿಂದಾಗಿ ಮೃತಪಟ್ಟಿದ್ದಾರೆ ಎಂದು 'ಗನ್‌ ವೈಲೆನ್ಸ್‌ ಆರ್ಕೈವ್‌' ವೆಬ್‌ ಸೈಟ್‌ ಮಾಹಿತಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.