ADVERTISEMENT

ಕೋವಿಡ್‌ ಚಿಕಿತ್ಸೆಗೆ ‘ಐಎಫ್‌ಎನ್ –ಎ2ಬಿ’ ಪರಿಣಾಮಕಾರಿ ಔಷಧ: ಸಂಶೋಧಕರ ಅಭಿಪ್ರಾಯ

ಪಿಟಿಐ
Published 16 ಮೇ 2020, 20:00 IST
Last Updated 16 ಮೇ 2020, 20:00 IST
   

ಟೊರಂಟೊ: ಜ್ವರಕ್ಕೆ ನೀಡಲಾಗುತ್ತಿದ್ದ ಔಷಧ ‘ಇಂಟರ್‌ಫೆರಾನ್ (ಐಎಫ್‌ಎನ್) –ಎ2ಬಿ’, ಕೋವಿಡ್‌ ರೋಗಿಗಳು ತ್ವರಿತವಾಗಿ ಗುಣಮುಖರಾಗಲು ನೆರವಾಗಲಿದೆ. ಅಲ್ಲದೆ, ಈ ಮೂಲಕ ಸೋಂಕು ಹರಡುವ ವೇಗವನ್ನು ಕುಗ್ಗಿಸಲು ನೆರವಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ನಿಯತಕಾಲಿಕವೊಂದರಲ್ಲಿ ಪ್ರಕಟಿಸಲಾದ ಅಧ್ಯಯನ ವರದಿಯೊಂದರ ಪ್ರಕಾರ, ಉಲ್ಲೇಖಿತ ಔಷಧವು ರೋಗಿಯನ್ನು ಸೋಂಕು ಮುಕ್ತಗೊಳಿಸಲಿದ್ದು, ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ.

ಕೆನಡಾದ ಟೊರಂಟೊ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಹಲವು ವರ್ಷಗಳಿಂದ ಬಳಕೆಯಲ್ಲಿರುವ ಔಷಧವು ಕೋವಿಡ್‌ ರೋಗಿಗಳಲ್ಲಿ ಏಳು ದಿನಗಳ ಅವಧಿಯಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ADVERTISEMENT

ಅಲ್ಲದೆ, ಈ ಔಷಧವು ರೋಗಿಯ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಲಿದೆ. ಹೊಸ ಸೋಂಕು ಕಂಡುಬಂದಾಗ ಪ್ರತ್ಯೇಕ ಔಷಧ ಪತ್ತೆಗೆ ಬದಲಾಗಿ ಪ್ರಾಥಮಿಕ ಚಿಕಿತ್ಸೆಗೆ ಲಭ್ಯವಿರುವ ಪರಿಣಾಮಕಾರಿ ಔಷಧವನ್ನು ಪರಿಗಣಿಸಬೇಕು ಎಂದು ಅಧ್ಯಯನ ವರದಿಯ ಲೇಖಕ, ಟೊರಂಟೊ ವಿಶ್ವವಿದ್ಯಾಲಯದ ಎಲಿನೊರ್ ಫಿಶ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.